Advertisement
ಶಿಕ್ಷಣವೆಂಬುವುದು ಸರಕಾರಗಳು ತಮ್ಮ ರಾಜಕೀಯ ನಿಲುವುಗಳಿಗೆ ಸೂಕ್ತವಾಗಿ ರೂಪಿಸುವಂತಹ ಅಜೆಂಡಾ ಆಗಬಾರದು. ಶಿಕ್ಷಣ ನೀತಿ ರಚನೆ ಸರಕಾರಗಳ ಜವಾಬ್ದಾರಿಯುತ ಕಾಯಕ. ಈ ನಿಟ್ಟಿನಲ್ಲಿ ಸರಕಾರಗಳು ಅತ್ಯಂತ ಗಂಭೀರವಾಗಿ ಎಚ್ಚರಿಕೆಯ ಹೆಜ್ಜೆ ಇಟ್ಟಾಗ ಮಾತ್ರ ಉತ್ತಮ ಶಿಕ್ಷಣ ವ್ಯವಸ್ಥೆ ಸಾಧ್ಯ. ನಮ್ಮದು ಬಹು ಭಾಷೆ, ಬಹು ಸಂಸ್ಕೃತಿ ನಾಡು. ನಮ್ಮ ಸಂವಿಧಾನದ ವ್ಯಾಪ್ತಿಯೊಳಗೆ ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ವ್ಯವಸ್ಥೆ ನಮ್ಮದಾಗಿರಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಮ್ಮ ಶಿಕ್ಷಣ ಸಮಾನತೆ, ಸಾಮಾಜಿಕ ನ್ಯಾಯ, ಆರ್ಥಿಕ, ಸಾಂಸ್ಕೃತಿಕ ನೆಲಗಟ್ಟಿನ ಮೇಲೆ ರೂಪುಗೊಳ್ಳಬೇಕು.
Related Articles
Advertisement
ಅಲ್ಲದೇ ಕಾಲೇಜುಗಳಲ್ಲಿ ಮೂಲ ಸೌರ್ಕಯಗಳಿಲ್ಲದೆ ಮುಕ್ತ ಆಯ್ಕೆಗಳ ವಿಷಯ ಹಾಗೂ ಕೇವಲ ಎರಡು ವಿಷಯಗಳನ್ನು ಮಾತ್ರ ಮೇಜರ್ ಆಗಿ ಆಯ್ಕೆ ಮಾಡಿಕೊಳ್ಳುವುದು ಒಂದು ರೀತಿ ಅಸಮಾಧಾನಕ್ಕೆR ಕಾರಣವಾಗಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳು ಇರಬಹುದು. ಆದರೆ ಸರಕಾರಿ ಕಾಲೇಜುಗಳ ಸ್ಥಿತಿ ಭಿನ್ನವಾಗಿದೆ. ನಮ್ಮ ಕಲಾ ಪದವಿ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳ ಉಪನ್ಯಾಸಕರು ಹೇಗಿರಲು ಸಾಧ್ಯ?ಮೊದಲನೇಯದಾಗಿ ಎನ್‌ಇಪಿಯನ್ನು ಜಾರಿಗೆ ತಂದ ಕ್ರಮವೇ ಸರಿಯಿಲ್ಲ. ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಿದರೆ ಅದರಿಂದ ಪರಿಣಾಮ ಬೀರುವುದು ವಿದ್ಯಾರ್ಥಿಗಳ ಮೇಲೆ. ಹಿಂದಿನ ಸರಕಾರದ ಅನಾಹುತಕಾರಿ ನಿರ್ಧಾರದಿಂದ ನಾವೀಗ ವಿದ್ಯಾರ್ಥಿಗಳ ಹಿತ ಕಾಪಾಡಬೇಕಾಗಿದೆ. ವಿಕಸನದ ಹಾದಿಯಲ್ಲಿರುವ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗದ ಮೂಲಕ ಶಿಕ್ಷಣ ವ್ಯವಸ್ಥೆ ಹೇರುವುದನ್ನು ಯಾವ ಸಮಾಜವೂ ಒಪ್ಪಲೂ ಸಾಧ್ಯವಿಲ್ಲ. 3 ವರ್ಷದ ಪದವಿಯನ್ನು 4 ವರ್ಷಕ್ಕೆ, ಬಹು ಆಗಮನ ಮತ್ತು ನಿರ್ಗಮನ (Multiple entry and exit) ಪದ್ಧತಿಯಿಂದ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಶಾಶ್ವತವಾಗಿ ನಿರ್ಗಮಿಸುವ ಸಾಧ್ಯತೆಗಳೇ ಹೆಚ್ಚು. ಪ್ರಥಮ ಅಥವಾ ದ್ವಿತೀಯ ವರ್ಷದ ಪ್ರಮಾಣ ಪತ್ರ ಪಡೆ ದವರಿಗೆ ಯಾವ ಉದ್ಯೋಗ ದೊರಕಲಿದೆ? ಸ್ಪಷ್ಟವಿಲ್ಲ. ಇನ್ನು ಮುಕ್ತ ಆಯ್ಕೆ (Open Electives) ಸಂಬಂಧಪಟ್ಟಂತೆ ಉಪನ್ಯಾಸಕರ ಕೊರತೆ ಹೇಳತೀರದು. ಇನ್ನು ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಕೊಡಲು ಹೋದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸ್ಥಿತಿ ಏನು? ಹೋಗಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಉಪನ್ಯಾಸಕರಿಗೂ ತರಬೇತಿಯನ್ನು ನೀಡಿಲ್ಲ. ಅವರ ಅಭಿಪ್ರಾಯ ಪಡೆದಿಲ್ಲ. ಈ ಕಾರಣಗಳಿಂದ ಈಗ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಹಲವಾರು ರೀತಿ ಗೊಂದಲದ ಗೂಡಾಗಿರುವ ಎನ್‌ಇಪಿಯನ್ನು ರಾಜ್ಯ ಸರಕಾರ ಒಪ್ಪಲು ಸಾಧ್ಯವಿಲ್ಲ. ಉದಾರೀ ಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಮಾರ್ಪಡುಗಳಾಗಿರಬಹುದು. ಕೆಲವು ಬದಲಾವಣೆ ಆವಶ್ಯಕವು ಆಗಿರಬಹುದು. ಹಾಗಾಗಿ ಪೂರ್ವ ತಯಾರಿ ಜತೆ ಸಂವಿಧಾನ ವ್ಯಾಪ್ತಿಗೆ ಒಳಪಟ್ಟು ಸರ್ವರಿಗೂ ಸಲ್ಲುವಂತ ಶಿಕ್ಷಣ ರೂಪಿಸುವುದು ಈಗ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾನೂನುಬದ್ಧ, ಸಂವಿಧಾನ ಬದ್ಧ ಸರ್ವರಿಗೂ ಸಲ್ಲುವಂತ ಉದ್ಯೋಗ ಆಧಾರಿತವಾದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ರಾಜ್ಯ ಶಿಕ್ಷಣ ನೀತಿ ರೂಪಿಸಲು ಮುಂದಾಗಿದೆ. ದೇಶ ಹಾಗೂ ರಾಜ್ಯದ ಆಸ್ಮಿತೆ ಒಳಗೊಂಡಂತೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್ ಅವರ ನಾಡಿನಲ್ಲಿ ಸಂವಿ ಧಾನ ಆಶಯಗಳಿಗೆ ಧಕ್ಕೆಯಾಗದಂತೆ ಸಮಾನತೆ -ಸಮಾನ ಅವಕಾಶ ಸಾಮಾಜಿಕ ನ್ಯಾಯ, ಜಾತ್ಯತೀತ ಮನೋ ಭಾವದ ಎಸ್‌ಇಪಿ ರೂಪಿಸಲು ನಮ್ಮ ಸರಕಾರ ಹೆಜ್ಜೆ ಇಟ್ಟಿದೆ. 70 ವರ್ಷಗಳಿಂದ ಸದೃಢವಾಗಿರುವ ನಮ್ಮ ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ಕೇಂದ್ರ ಸರಕಾರದ ನಿಲುವಿಗೆ ನಮ್ಮ ವಿರೋಧವಿದೆ. ಈ ಹಿಂದಿನ ಎಲ್ಲ ಶಿಕ್ಷಣ ನೀತಿಗಳ ಜತೆಗೆ ಎನ್‌ಇಪಿಯಲ್ಲಿ ಉತ್ತಮವಾದ ಅಂಶಗಳಿದ್ದರೆ ಸ್ವೀಕರಿಸಲು ನಮ್ಮ ಸರಕಾರ ಮುಕ್ತವಾಗಿದೆ. ವಿವಿಧ ಕ್ಷೇತ್ರದ ಗಣ್ಯರು, ವಿದ್ಯಾರ್ಥಿ ಗಳು, ನ್ಯಾಯಾಧೀಶರು ವಿಜ್ಞಾನಿಗಳು ಸಾಹಿತಿಗಳು, ಬುದ್ಧಿ ಜೀವಿಗಳೊಂದಿಗೆ ಚರ್ಚಿಸಿ ಎಸ್‌ಇಪಿಯನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಬದ್ಧರಾಗಿದ್ದೇವೆ. – ಡಾ| ಎಂ.ಸಿ. ಸುಧಾಕರ್,
ಉನ್ನತ ಶಿಕ್ಷಣ ಸಚಿವರು