Advertisement

ರಾಷ್ಟ್ರಾಭಿವೃದ್ಧಿಗೆ ಎನ್‌ಇಪಿ ಪೂರಕ: ಡಾ|ಅಶ್ವತ್ಥ ನಾರಾಯಣ

11:08 AM Oct 12, 2021 | Team Udayavani |

ಬೀದರ: ದೇಶದಲ್ಲಿ ಜಾರಿಗೆ ತರಲಾಗುತ್ತಿರುವ ಹೊಸ ಶಿಕ್ಷಣ ನೀತಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಿದೆ. ಕೌಶಲ್ಯ ಕೇಂದ್ರಿತ ಶಿಕ್ಷಣ ನಿರುದ್ಯೋಗ ನಿವಾರಣೆಗೆ ನೆರವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

Advertisement

ನಗರದ ಕೆಆರ್‌ಇ ಸಂಸ್ಥೆಯ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆ ಫಲವಾಗಿ ಮಾಹಿತಿ ತಂತ್ರಜ್ಞಾನ ಬೆಳೆದು ಸಾಕಷ್ಟು ಬದಲಾವಣೆಗಳಾಗಿ ಬೆರಳ ತುದಿಯಲ್ಲಿ ಜಗತ್ತು ಕಾಣುವಂತಾಗಿದೆ. ಇದಕ್ಕೆ ಪೂರಕವಾಗಿ ಕೆಲವೇ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಅದರಲ್ಲಿ ಕರ್ನಾಟಕ ಕಾಲೇಜು ಕೂಡ ಒಂದಾಗಿದೆ. ಈ ಕಾಲೇಜು ಈ ಸಾಲಿನಲ್ಲಿ ಮತ್ತೂಮ್ಮೆ ನ್ಯಾಕ್‌ ಮಾನ್ಯತೆ ಉಳಿಸಿಕೊಂಡರೆ ಸ್ವಾಯತ್ತತೆ ಮಾನ್ಯತೆ ಕೊಡಲಾಗುವುದು ಎಂದರು.

ಕೇಂದ್ರದ ನವೀಕರಿಸಬಹುದಾದ ಇಂಧನಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ಒಂದು ಕಾಲೇಜಿನ 50 ವರ್ಷದ ಪಯಣ ಚಾರಿತ್ರಿಕವಾಗಿ ಮಹತ್ವದ್ದು. ನಾನೂ ಈ ಸಂಸ್ಥೆಯಲ್ಲಿ ಓದಿ ಅದರ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸದಾವಕಾಶ ಒದಗಿದ್ದು ನನ್ನ ಸೌಭಾಗ್ಯ ಎಂದರು.

ಇದನ್ನೂ ಓದಿ:ಫೋರ್ಬ್ಸ್ ಸೆಲೆಬ್ರಿಟಿ ಮ್ಯಾಗಜಿನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್‌ ಮಿಂಚಿಂಗ್‌!

Advertisement

ಕರಾಶಿ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಅಷ್ಟೂರ ಅಧ್ಯಕ್ಷತೆ ವಹಿಸಿ ಮಾತನಾಡಿ, 1942ರಲ್ಲಿ ಹಿರಿಯರು ನೆಟ್ಟಿದ ಸಸಿ ಈಗ ಹೆಮ್ಮರವಾಗಿ ಸಹಸ್ರಾರು ಜನರಿಗೆ ಆಸರೆ ನೀಡಿದೆ. ಬರುವ ದಿನಗಳಲ್ಲಿ ಈ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.

ಈ ವೇಳೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಶಾಸಕರಾದ ಬಂಡೆಪ್ಪ ಖಾಶೆಂಪುರ, ರಹೀಮ್‌ ಖಾನ್‌, ಶಶೀಲ್‌ ನಮೋಶಿ, ಡಾ| ಚಂದ್ರಶೇಖರ ಪಾಟೀಲ, ಗುಲಬರ್ಗಾ ವಿವಿ ಕುಲಪತಿ ಪ್ರೊ| ದಯಾನಂದ ಅಗಸರ, ಕೆಎಸ್‌ ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಸಂಸ್ಥೆ ಉಪಾಧ್ಯಕ್ಷ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಬಸವರಾಜ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಮಹೇಶಕುಮಾರ ಭದಭದೆ, ತಾಂಡೂರ ರಾಜಶೇಖರ, ಚಂದಾ ಶಾಂತಕುಮಾರ, ಡಿವಿ ಸಿಂದೋಲ, ಮಲ್ಲಿಕಾರ್ಜುನ ಹತ್ತಿ, ಶೆಟಕಾರ ಚಂದ್ರಕಾಂತ, ವಿಜಯಕುಮಾರ ಗೂನಳ್ಳಿ, ಬುಯ್ನಾ ವೀರಭದ್ರಪ್ಪ, ಸತೀಶ ಪಾಟೀಲ, ಗಾದಗೆ ಶಿವಾನಂದ, ಕರಾಶಿ ನ್ಯಾಸದ ಅಧ್ಯಕ್ಷ ಡಾ| ಚನ್ನಬಸಪ್ಪ ಹಾಲಹಳ್ಳಿ, ಕಾರ್ಯದರ್ಶಿ ಶಿವಶಂಕರ ಶೆಟಕಾರ ಇದ್ದರು.

ಸುವರ್ಣ ಮಹೋತ್ಸವ ನಿಮಿತ್ತ ಕಟ್ಟಲಾದ ಕಾಲೇಜು ಕಟ್ಟಡ, ಪರೀಕ್ಷಾ ಭವನ, ವಾಣಿಜ್ಯ ಸಂಕೀರ್ಣ ಇದೇ ವೇಳೆ ಉದ್ಘಾಟಿಸಲಾಯಿತು. ಸುವರ್ಣ ಕರ್ನಾಟಕ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಾಯಿತು. ವಿವಿಧ ಉನ್ನತ ಹುದ್ದೆಯಲ್ಲಿರುವ ಕಾಲೇಜಿನ 10 ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರಾಶಿ ಸಂಸ್ಥೆ ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು. ಕೆ. ರಶ್ಮಿ ಬೆಂಗಳೂರು ನಿರೂಪಿಸಿದರು. ಉಪ ಪ್ರಾಂಶುಪಾಲ ಮಲ್ಲಿಕಾರ್ಜುನ ಹಂಗರಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಡಾ| ಬಸವರಾಜ ಬಲ್ಲೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next