Advertisement
ನಗರ ಹೊರವಲಯದ ಬೋಗಾದಿಯ ಬಾಪೂಜಿ ಬಡಾವಣೆಯಲ್ಲಿ ಶುಕ್ರವಾರ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಮಾತನಾಡಿದಅವರು, ಸಮಾಜಮುಖೀಯಾದ ಶಿಕ್ಷಣ ನೀತಿಯಿಂದ ಭವಿಷ್ಯದಲ್ಲಿ ಭಾರತವು ಪರಮ ಗುರು ಆಗಿ ರೂಪಗೊಳ್ಳಲಿದ್ದು, ಪರಿಪೂರ್ಣ ದೇಶವಾಗಿಯೂ ತನ್ನಕಾಲ ಮೇಲೆ ನಿಂತುಕೊಳ್ಳುವಷ್ಟು ಸ್ವಾವಲಂಬನೆಯಾಗಲಿದೆ ಎಂದು ವಿವರಿಸಿದರು.
Related Articles
Advertisement
ಗುಣಮಟ್ಟದ ಶಿಕ್ಷಣ: ಈಗಿನ ವ್ಯವಸ್ಥೆ ಕೆಟ್ಟುಹೋಗಿದೆ. ಸ್ವಾರ್ಥ ಹೆಚ್ಚಾಗಿ, ಅನೈತಿಕತೆ ವಿಜೃಂಭಿಸುತ್ತಿದೆ. ಮನುಷ್ಯ ಮನುಷ್ಯ ನಡುವೆ ನಂಬಿಕೆಯೇ ಇಲ್ಲವಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಮಾಡಲು ಸಾಧ್ಯವಾಗದಂತಹ ಸಂಸ್ಕಾರಯುಕ್ತ ಕೆಲಸವನ್ನು ಸುತ್ತೂರು ಮಠ ಶಿಕ್ಷಣದ ಮೂಲಕ ಮಾಡುತ್ತಿವೆ. ಇದು ಮನುಷ್ಯರಿಗೆ ಬೇಕಾದ ಗುಣಮಟ್ಟದ ಶಿಕ್ಷಣನೀಡುತ್ತಿದೆ. ಜತೆಗೆ, ರಾಷ್ಟ್ರೀಯ ನೀತಿ ಅಳವಡಿಕೆಯಲ್ಲೂ ರಾಜ್ಯ ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರು.
ಸಹ ಶಿಕ್ಷಣ ಪದ್ಧತಿಗೆ ಈಗಲೂ ಹಿಂದೇಟು: ಬಾಲಕ ಮತ್ತು ಬಾಲಕಿಯರು ಒಟ್ಟಿಗೆ ಕಲಿಯುವ ಸಹ ಶಿಕ್ಷಣ ಪದ್ಧತಿಗೆ (ಕೋ ಎಜುಕೇಷನ್) ಈಗಲೂ ಪಾಲಕರು ಹೆದರುತ್ತಾರೆ. ಇಂತಹ ಶಾಲಾ-ಕಾಲೇಜುಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲಕಿಯರಿಗಾಗಿ ಜೆಎಸ್‌ಎಸ್ ಮಹಾ ವಿದ್ಯಾಪೀಠವು ಬಾಲಕಿಯರಿಗಾಗಿ ಹೊಸ ಕಾಲೇಜು ಕಟ್ಟಿದೆ. ಅದು ನಗರದ ಹೃದಯಭಾಗಕ್ಕೆ ಸೀಮಿತವಾಗದೆ, ನಗರ ಹೊರವಲಯದ ವಿದ್ಯಾರ್ಥಿ ಗಳಿಗೂ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ಹೊಸ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಪರಿಕರಗಳು ಲಭ್ಯವಿವೆ. ಗುಣಮಟ್ಟದ ಶಿಕ್ಷಣವನ್ನು ಜೆಎಸ್‌ಎಸ್ ಸಂಸ್ಥೆಯು ನೀಡುವ ಮೂಲಕ ಮಾದರಿಯಾಗಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಎಂಎಲ್ಸಿ ಅರುಣ್‌ಶಹಾಪುರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೀಣಾ ನಾಗೇಶ್ ಇದ್ದರು.