Advertisement
ಈವರೆಗೂ ಅಂಗನವಾಡಿ ಮಕ್ಕಳ ಬೋಧನೆಗೆ ನಿರ್ದಿಷ್ಟ ಚೌಕಟ್ಟು ಇರಲಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳು ಬೆಳಗ್ಗೆ ಬಂದು ತಿಂಡಿ, ಮಧ್ಯಾಹ್ನದ ಊಟ ಪೂರೈಸಿ ವಾಪಸಾಗುತ್ತಿದ್ದರು. ಕಲಿಕೆಗೆ ಆದ್ಯತೆ ತೀರಾ ಕಡಿಮೆಯಿತ್ತು. ಎನ್‌ಇಪಿ ಅನುಷ್ಠಾನದ ಅನಂತರ ಆಟದ ಮೂಲಕ ಕಲಿಕೆಗೆ ಆದ್ಯತೆ ಸಿಗಲಿದೆ.
40 ವರ್ಷ ಮೇಲ್ಪಟ್ಟ ಹಾಗೂ ಎಸೆಸೆಲ್ಸಿ, ಪಿಯುಸಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ (ಶಿಕ್ಷಕಿ) ಯರಿಗೆ ಎನ್‌ಇಪಿ ಬೋಧನಾ ತರಬೇತಿ ನೀಡಲಾಗುತ್ತದೆ. ಪಠ್ಯಕ್ರಮದ ಅನುಸಾರ ಕಾರ್ಯಕರ್ತೆಯರಿಗೆ ಬೋಧನ ಕೈಪಿಡಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Related Articles
– ಬಿ.ಸಿ. ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಚಿವ
Advertisement
ಶಾಲಾ ಪೂರ್ವ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಈಗಾಗಲೇ 6 ಉಪಸಮಿತಿ ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಅವುಗಳ ಶಿಫಾರಸಿನಂತೆ ಪ್ರತ್ಯೇಕ ಪಠ್ಯಕ್ರಮ ರಚಿಸಲಾಗುತ್ತದೆ. 20 ಸಾವಿರ ಅಂಗನವಾಡಿಗಳಲ್ಲಿ ಈ ವರ್ಷದಲ್ಲೇ ಅನುಷ್ಠಾನ ಮಾಡುವ ಗುರಿಯಿದೆ.– ಹಾಲಪ್ಪ ಆಚಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಇದನ್ನೂ ಓದಿ : ಯಾವುದೇ ಭ್ರಷ್ಟಾಚಾರ, ಗಳಿಕೆಗಿಂತ ಹೆಚ್ಚಿನ ಆಸ್ತಿ ವಿವರ ಇದ್ದರೆ ಹಂಚಿಕೊಳ್ಳಿ : ಎಸ್‌ಪಿ