Advertisement

 ತೆಕ್ಕಟ್ಟೆಯ ಬಡ ಜನರಿಗೆ ಫುಡ್ ಕಿಟ್ ವಿತರಿಸಿದ ನೆನಪು ಟ್ರಸ್ಟ್

01:30 PM Jun 08, 2021 | Team Udayavani |

ತೆಕ್ಕಟ್ಟೆ : ಸರಿಸುಮಾರು ಏಳೆಂಟು ವರುಷಗಳಿಂದ 10,12 ಹೈಸ್ಕೂಲು ಗೆಳೆಯರಿಂದ ಪ್ರಾರಂಭಗೊಂಡ ವಾಟ್ಸಾಪ್ ಗ್ರೂಪೊಂದು ಚರ್ಚಿಸುವಾಗ ಸಮಾಜಮುಖಿ ಕೆಲಸಕ್ಕಾಗಿ ರೂಪುಗೊಂಡ ಸಂಸ್ಥೆ ನೆನಪು ಟ್ರಸ್ಟ್ (ರಿ). ಈ ಟ್ರಸ್ಟ್ ನಲ್ಲಿ ಇರುವ 45ಕ್ಕೂ ಹೆಚ್ಚು ಸಮಾನ ಮನಸ್ಕ ಗೆಳೆಯರು ಯಾವುದೇ ಫಲಾಪೇಕ್ಷೆ ಬಯಸದೇ ಗ್ರೂಪ್ ನ ತೆಕ್ಕಟ್ಟೆಯಲ್ಲಿ ಸಣ್ಣ ಕಚೇರಿಯನ್ನು ತೆರೆದು ಸ್ವಇಚ್ಛೆಯಿಂದ ಯುವ ಸಂಘಟಕ ಶ್ರೀನಿಧಿ ಉಪಾಧ್ಯ ಕೊರವಡಿ ಅವರ ಮುಂದಾಳತ್ವದಲ್ಲಿ ಸತತ 7,8 ವರುಷಗಳಿಂದಲೂ ತಮ್ಮಿಂದಾದ ನೆರವನ್ನು ನೀಡುತ್ತಾ ಬಂದಿದೆ.

Advertisement

ಪ್ರಸ್ತುತ ಕೋವಿಡ್ ನ  ಈ ಸಂಕಷ್ಟದ ಸ್ಥಿತಿಯಲ್ಲಿ ನೆರವನ್ನು ಮುಂದುವರಿಸಿದ ಈ ಗೆಳಯರ ಬಳಗ ಇತ್ತೀಚೆಗಷ್ಟೇ ಜೀವನ್ ಮಿತ್ರ ಸಾಸ್ತಾನ ಟೋಲ್ ನಲ್ಲಿ ಚಾಲಕರಿಗೆ ನೀಡುತ್ತಿರುವ ಮಧ್ಯಾಹ್ನದ 2 ದಿನದ ಊಟದ ವೆಚ್ಚವನ್ನು ನೀಡಿ, ಕುಂಭಾಸಿ ಆಸುಪಾಸಿನ ಬಡ ವರ್ಗದ ಜನರಿಗೆ ಸುಮಾರು 25 ಸಾವಿರ ವೆಚ್ಚದ ಆಹಾರ ಸಾಮಗ್ರಿಗಳನ್ನು ನೀಡಿ, ಇವತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 100 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಸಮರೋಪಾದಿಯಲ್ಲಿ ವಿತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next