Advertisement

ನೆಲ್ಯಾಡಿ: ‘ಕೆಸರ್‌ಡೊಂಜಿ ದಿನ’ಆಟೋಟ ಸ್ಪರ್ಧೆ

12:55 PM Aug 31, 2018 | |

ನೆಲ್ಯಾಡಿ : ನೆಲ್ಯಾಡಿ ಗ್ರಾಮದ ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗ ಮತ್ತು ಊರ ಹತ್ತು ಸಮಸ್ತರ ಆಶ್ರಯದಲ್ಲಿ ‘ಕೆಸರ್‌ಡೊಂಜಿ ದಿನ’ ಸ್ಥಳೀಯರಿಗೆ ಆಟೋಟ ಸ್ಪರ್ಧೆ ಪಡುಬೆಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಕೆ. ಶ್ರೀನಿವಾಸ ರಾವ್‌ ಅವರು ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಇಂತಹ ಕಾರ್ಯಗಳಿಗೆ ಯುವಜನತೆ ಮುಂದೆ ಬರಬೇಕೆಂದು ಹೇಳಿದರು.

Advertisement

ಪಡುಬೆಟ್ಟು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಕೆ., ನೆಲ್ಯಾಡಿ ಶಿಲ್ಪ ಕನ್‌ಸ್ಟ್ರಕ್ಷನ್‌ನ ಶಿವಣ್ಣ ಪಿ. ಹೆಗ್ಡೆ ಅವರು ಶುಭಹಾರೈಸಿದರು. ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕೆ. ಸುಬ್ರಹ್ಮಣ್ಯ ಶಬರಾಯ ಉಪಸ್ಥಿತರಿದ್ದರು. ಮಹಾವಿಷ್ಣು ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಕಾಶ್‌ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಆಮುಂಜ ವಂದಿಸಿದರು. ಮಾಜಿ ಅಧ್ಯಕ್ಷ ಶಿವಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ
ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಅವರ ಅಧ್ಯಕ್ಷತೆ ಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಕಡಬ ಶಾಖಾ ಪ್ರಬಂಧಕ ನಿತ್ಯಾನಂದ ಶೆಟ್ಟಿ, ಉದ್ಯಮಿ ಶಿವಣ್ಣ ಪಿ. ಹೆಗ್ಡೆ, ಮಹಾವಿಷ್ಣು ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಕಾಶ್‌ ಬೀದಿಮಜಲು ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಾವಿಷ್ಣು ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಶಿವಪ್ರಸಾದ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ ಶೆಟ್ಟಿ ಬೀದಿ ವಂದಿಸಿದರು.

ಸ್ಥಳೀಯ ಪ್ರಮುಖರಾದ ಸುಂದರ ಗೌಡ ಅತ್ರಿಜಾಲು, ರವಿಪ್ರಸಾದ್‌ ಶೆಟ್ಟಿ ರಾಮನಗರ, ಶ್ರೀಪತಿ ಶಬರಾಯ, ಫ್ಲೋರಿನಾ ಡಿ’ಸೋಜಾ ಸಹಿತ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಹಾವಿಷ್ಣು ಗೆಳೆಯರ ಬಳಗದ ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸಹಕರಿಸಿದರು.

ಸ್ಪರ್ಧೆಗಳು
ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 100ಮೀ. ಓಟ, ಜನಕಂಬಳ, ಹಾಳೆ ಓಟ, ಬಾಳೆಮರ ಹತ್ತುವುದು, ಉಪ್ಪು ಮೂಟೆ, ಮಡಕೆ ಒಡೆಯುವುದು, ಹಗ್ಗಜಗ್ಗಾಟ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 100 ಮೀ. ಓಟ, ಜನಕಂಬಳ, ಹಾಳೆ ಓಟ, ಉಪ್ಪು ಮೂಟೆ, ಟಪ್ಪಾಂಗಾಯಿ, ಲಿಂಬೆ ಚಮಚ, ಮಡಕೆ ಒಡೆಯುವುದು, ಹಗ್ಗಜಗ್ಗಾಟ, ಸಾರ್ವಜನಿಕ ಪುರುಷರಿಗೆ ಗುಂಡೆಸೆತ, ಹಗ್ಗಜಗ್ಗಾಟ, ಗೋಣಿಚೀಲ ಓಟ, ಜನಕಂಬಳ, ವಾಲಿಬಾಲ್‌, ಮಡಕೆ ಒಡೆಯುವುದು, ಕಬಡ್ಡಿ, ಮಹಿಳೆಯರಿಗೆ ಗುಂಡೆಸೆತ, ಹಗ್ಗಜಗ್ಗಾಟ, ಬಾಲ್‌ಪಾಸಿಂಗ್‌, ಸಂಗೀತ ಕುರ್ಚಿ, ಮಡಕೆ
ಒಡೆಯುವ ಸ್ಪರ್ಧೆಗಳು ನಡೆದವು. 6 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ವೇಷ ಪ್ರದರ್ಶನ ನಡೆಯಿತು. ಪಡುಬೆಟ್ಟು ಪ್ರೌಢಶಾಲಾ ದೈ.ಶಿ. ಶಿಕ್ಷಕ, ರಾಜ್ಯಮಟ್ಟದ ತೀರ್ಪುಗಾರ ಕುಶಾಲಪ್ಪ ಗೌಡ, ರಾಜ್ಯಮಟ್ಟದ ಹಗ್ಗಜಗ್ಗಾಟ ತೀರ್ಪುಗಾರ ಸುರೇಶ್‌ ಪಡಿಪಂಡ ಅವರು ತೀರ್ಪುಗಾರರಾಗಿ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next