Advertisement
ಕಾಸರಗೋಡಿನ ಯುವ ಉದ್ಯಮಿ ಯು.ಕೆ. ಯೂಸುಫ್ ಕಡಿಮೆ ವೆಚ್ಚದ ಈ ಹೊಸ ವಿಧಾನ ಪರಿಚಯಿಸಿದ್ದು, ನೆಲ್ಲಿಕುಂಜೆ ಕಡಪ್ಪುರದಲ್ಲಿ ಪ್ರಾಯೋಗಿಕವಾಗಿ ಸೀ ವೇವ್ ಬ್ರೇಕರ್ ನಿರ್ಮಿಸಲಾಗಿದೆ. ಯೋಜನೆ ಬಗ್ಗೆ ಕರ್ನಾಟಕ ಸರಕಾರವೂ ಉತ್ಸಾಹ ತೋರಿದ್ದು, ಈಗಾಗಲೇ ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಅಂಗಾರ ಅವರು ಅಧಿಕಾರಿಗಳೊಂದಿಗೆ ಕಾಸರಗೋಡಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಯೂಸುಫ್ ಅವರು ಪ್ರಾಯೋಗಿಕವಾಗಿ ಕೈಗೊಂಡಿರುವ ಸೀ ವೇವ್ ಬ್ರೇಕರ್ ಭವಿಷ್ಯದಲ್ಲಿ ಸಮುದ್ರ ಕೊರೆತ ತಡೆಗಟ್ಟುವಲ್ಲಿ ಮಹತ್ವದ ಮೈಲುಗಲ್ಲಾಗುವ ಸಾಧ್ಯತೆಯಿದೆ.
ಬೃಹತ್ ಗಾತ್ರದ ಬಂಡೆಕಲ್ಲುಗಳನ್ನು ಸಮುದ್ರ ದಡಕ್ಕೆ ತಂದು ಪೇರಿಸಿ ತಡೆಗೋಡೆ ನಿರ್ಮಿಸಿದರೂ ಸಮುದ್ರ ಕೊರೆತ ಯಶಸ್ವಿಯಾಗಿ ತಡೆಗಟ್ಟುವಲ್ಲಿ ಸರಕಾರಕ್ಕೆ ಇದುವರೆಗೆ ಸಾಧ್ಯವಾಗದಿರುವ ಕಾರಣ ಸೀ ವೇವ್ ಬ್ರೇಕರ್ ಎಂಬ ಹೊಸ ಪರಿಕಲ್ಪನೆಯಿಂದ ಕೊರೆತ ತಡೆಯುವ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 8 ಅಡಿ ಆಳಕ್ಕೆ ಹಾಗೂ 20 ಅಡಿ ಅಗಲದಲ್ಲಿ ಹೊಂಡ ತೆಗೆದು ತಳಭಾಗದಿಂದ ಕಾಂಕ್ರೀಟ್ ಫ್ರೇಮ್ ಜೋಡಿಸಿ, ಇದರ ಮಧ್ಯೆ ಮರಳು ತುಂಬಿ, ಮೇಲ್ಭಾಗದಲ್ಲಿ ಹುಲ್ಲು ಹಾಗೂ ಇತರ ಗಿಡಗಳನ್ನು ಬೆಳೆಸಲಾಗುತ್ತದೆ. ನೆಲ್ಲಿಕುಂಜೆಯಲ್ಲಿ ಪ್ರಾಯೋಗಿಕವಾಗಿ 30 ಮೀ. ಉದ್ದದ ಸೀ ವೇವ್ ಬ್ರೇಕರನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ : ಜಮ್ಮು – ಕಾಶ್ಮೀರದ ಕಿಶ್ತ್ವಾರ್ ಸುರಂಗದಲ್ಲಿ ಭೂಕುಸಿತ : 4 ಸಾವು, 6 ಮಂದಿಗೆ ಗಾಯ