ಬದಿಯಡ್ಕ : ನೆಲ್ಲಿಕಟ್ಟೆ ನಾರಾಯಣ ಗುರುದೇವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದಂಗವಾಗಿ ನಿನ್ನೆ (ಎ. 10) ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ಜರಗಿತು.
ನಂತರ ಅದ್ರುಕುಯಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಹೊರೆ ಕಾಣಿಕೆ ಮೆರವಣಿಗೆ ಸಾಗಿ ಬಂತು. ಮಧ್ಯಾಹ್ನ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಗುರುದೇವ ಪಂಚಲೋಹ ವಿಗ್ರಹ ಘೋಷಾಯಾತ್ರೆಯೊಂದಿಗೆ ಸಂಜೆ ಗುರುದೇವ ವಿಗ್ರಹವನ್ನು ಕ್ಷೇತ್ರ ಸನ್ನಿಧಿಗೆ ಪ್ರವೇಶಿಸಲಾಯಿತು. ಬಳಿಕ ಆಲಯ ಪರಿಗೃಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ, ವಾಸ್ತು ಪೂಜೆ, ವಾಸ್ತು ಹೋಮ, ಪ್ರಾಹಾರ ಬಲಿ, ಪ್ರಸಾದ ಶುದ್ಧಿ , ಮಹಾ ಸುದರ್ಶನ ಹೋಮ ನಡೆಯಿತು.
ಎ. 11ರ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಬೆಳಗ್ಗೆ 6 ರಿಂದ ವರ್ಕಲ, ಶಿವಗಿರಿ ಮಠ ಪದ್ಮ ಶ್ರೀ ಶ್ರೀಮದ್ ವಿಶುದ್ಧಾನಂದ ಸ್ವಾಮೀಜಿಯವರಿಂದ ಗುರುದೇವ ಪಂಚ ಲೋಹ ವಿಗ್ರಹದ ಪ್ರತಿಷ್ಠಾ ಕಾರ್ಯ ನೆರವೇರಲಿರುವುದು. ಬ್ರಹ್ಮಶ್ರೀ ರಾಕೇಶ್ ತಂತ್ರಿ ಕಾರ್ಮಿಕತ್ವ ವಹಿಸುವರು. ಬಳಿಕ ಕಲಶಾಭಿಷೇಕ, ಮಹಾಪೂಜೆ, ಸರ್ವೈಶ್ವರ್ಯ ದೀಪ ಪೂಜೆ ನಡೆಯಲಿದೆ. ಸಮರ್ಪಣೆ ಸಮ್ಮೇಳನವನ್ನು ಬ್ರಹ್ಮ ಶ್ರೀ ಸ್ವಾಮಿ, ನ್ಯಾಯವಾದಿ ಪದ್ಮರಾಜ್, ನಾರಾಯಣನ್ ಮಂಜೇಶ್ವರ, ಸುನೀಲ್ ಕುಮಾರ್ ಬಜಲ್, ರವಿ ಪೂಜಾರಿ, ಎ.ಟಿ. ವಿಜಯನ್, ಎನ್.ಸಿ. ಶೇಖರನ್ ಮತ್ತಿತರರು ಉಪಸ್ಥಿತರಿರುವರು. ಸಂಜೆ ಭಜನೆ, ಸಾಂಸ್ಕೃತಿಕ ಸಮ್ಮೇಳನದಲ್ಲಿ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಗಣ್ಯರು ಉಪಸ್ಥಿತರಿರುವರು.
ರಾತ್ರಿ ಗುರುಪೂಜೆ, ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಎ. 12 ರಂದು ಗುರುಪೂಜೆ, ಭಜನೆ, ಗುರುಧರ್ಮ ಪ್ರಚಾರ ಸಮ್ಮೇಳನ ನಡೆಯಲಿದೆ. ಸಂಜೆ ಭಜನೆ, ರಾತ್ರಿ ನೃತ್ಯ ಕಾರ್ಯಕ್ರಮ, ಹುಲ್ಪೆ ಸಮರ್ಪಣೆ ನಡೆಯಲಿದೆ. ರಾತ್ರಿ ಏಷ್ಯನ್ ಕಿಡ್ಸ್ ಡ್ಯಾನ್ಸ್ ನೈಟ್ – 2019 ನಡೆಯಲಿದೆ. ರಾತ್ರಿ ಜಗದ್ಗುರು ಆದಿ ಶಂಕರನ್ ಮಲೆಯಾಳ ನಾಟಕ ಪ್ರದರ್ಶನಗೊಳ್ಳಲಿದೆ. ಎ. 13 ರಂದು ಬೆಳಿಗ್ಗೆ ಗುರುಪೂಜೆ, ಭಜನೆ, ಆಚಾರ್ಯ ಸಂಗಮ ನಡೆಯಲಿದೆ. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪೂರ್ವ ಪದಾಧಿಕಾರಿಗಳನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಭಜನೆ, ರಾತ್ರಿ ಗುರುಪೂಜೆ, ನಾನಾ ಪ್ರಾದೇಶಿಕ ಸಮಿತಿಗಳಿಂದ ಹುಲ್ಪೆ ಸಮರ್ಪಣೆ, ರಾತ್ರಿ ಗಾನ ಮೇಳದೊಂದಿಗೆ ಸಮಾಪ್ತಿಗೊಳ್ಳಲಿದೆ.