Advertisement

ಜನರ ದಿಕ್ಕು ತಪ್ಪಿಸಿ ಕಳ್ಳತನ ಮಾಡುತಿದ್ದವರ ಬಂಧನ: ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ

02:13 PM Apr 12, 2022 | Team Udayavani |

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪ ವಿಭಾಗದ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇತ್ತೀಚೆಗೆ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನಲ್ಲಿ 334 ಗ್ರಾಂ ಚಿನ್ನಾಭರಣ ಸೇರಿದಂತೆ 12,55000 ರೂ ಮೌಲ್ಯದ ಕಳವು ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರ ದಿಕ್ಕು ತಪ್ಪಿಸಿ ಕಳ್ಳತನ ಮಾಡುತಿದ್ದ ಆರೋಪಿಗಳು ವಶಕ್ಕೆ ಪಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ರಸ್ತೆ ಬದಿಯ ಹೋಟೆಲ್ ಗಳಲ್ಲಿ ಊಟಕ್ಕೆ ತೆರಳಿದ ವೇಳೆ ಲ್ಯಾಪ್ ಟಾಪ್ ಮೊಬೈಲ್ ಫೋನ್ ಕಳವು ಮಾಡುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ 12,50,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕ್ಯಾಪ್ಸಿಕಂ ಬೆಳೆಯಿಂದ ಉತ್ತಮ ಲಾಭ: ಹೈನುಗಾರಿಕೆ ಜೊತೆ ಕೃಷಿಯಲ್ಲಿ ಖುಷಿ ಕಂಡ ದಂಪತಿಗಳು

ತ್ಯಾಮಗೊಂಡ್ಲು ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ಭೇದಿಸಿದ್ದು, ಒಟ್ಟು 26,55,000 ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣ ಪ್ರಶಂಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next