Advertisement

ಓಜಿ ಕುಪ್ಪಂ ಗ್ಯಾಂಗ್‌ನ ನಾಲ್ವರು ಆರೋಪಿಗಳ ಸೆರೆ

03:18 PM Aug 22, 2021 | Team Udayavani |

ನೆಲಮಂಗಲ: ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್‌ನ್ನುನೆಲಮಂಗಲ ಗ್ರಾಮಾಂತರ
ಪೊಲೀಸರು ಖೆಡ್ಡಾತೋಡಿದ್ದಾರೆ. ವೃತ್ತನಿರೀಕ್ಷಕ ಎಂ.ಆರ್‌.ಹರೀಶ್‌, ಗ್ರಾಂ.ಠಾಣಾ ಸಬ್‌ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಟಿ.ಬೇಗೂರು
ಗ್ರಾಮದ ಬ್ಯಾಂಕ್‌ ಆಫ್ ಇಂಡಿಯಾ ಬಳಿ ಓಜಿ ಕುಪ್ಪಂ ಗ್ಯಾಂಗ್‌ನ್ನು ಖೆಡ್ಡಾಗೆ ಬೀಳಿಸಿದೆ.

Advertisement

ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಬರುತಿದ್ದ ಗ್ರಾಹಕರ ಗಮನ ಬೇರೆಡೆ ಸೆಳೆದು ಕಳ್ಳತನಕ್ಕೆ ಹೊಂಚುಹಾಕಿ ಕುಳಿತ್ತಿದ್ದ ನಾಲ್ವರು
ಖದೀಮರನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರನ್ನು ವಿಚಾರಣೆ ಒಳಪಡಿಸಿದ್ದು ನೆಲಮಂಗಲ,ದೊಡ್ಡಬಳ್ಳಾಪುರ, ಆನೇಕಲ್‌, ಹೆಬ್ಬಗೋಡಿ, ಜಿಗಣಿ, ಅತ್ತಿಬೆಲೆ,ಕಗ್ಗಲಿಪುರ, ಐಜೂರು, ಬಂಗಾರಪೇಟೆಯ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಒಟ್ಟಾರೆ 11 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದುಬಂಧಿತರಿಂದ 15.20ಲಕ್ಷ ರೂ, 03ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಗಾಂಜಾ ಮಾರಾಟ ಯುವಕನ ಬಂಧನ: ನಗರದ ಹೊರವಲಯದ ಅರಿಶಿನಕುಂಟೆಯಲ್ಲಿರುವ ಗ್ರಾಂ.ಠಾಣಾ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಪಟ್ಟಣ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ಎ.ಕುಮಾರ್‌, ಎಸ್‌ಐ ಸುರೇಶ್‌ ನೇತೃತ್ವದ ತಂಡ ಇಂದಿರಾನಗರದ ಬಳಿಯ ಸ್ಮಶಾನದ ಹತ್ತಿರ ಯುವಕನನ್ನು ಬಂಧಿಸಿ 600ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡರು. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಟೈಯರ್‌ ಕಳ್ಳರ ಬಂಧನ: ಪಟ್ಟಣದ ವಿಶ್ವೇಶ್ವರಪುರದಲ್ಲಿರುವ ಮೆ.ಆಗಸ್ತ್ಯ ಈಚರ್‌ ಸ್ಟಾಕ್‌ಯಾರ್ಡ್‌ನಲ್ಲಿ ಕಳ್ಳತನವಾಗಿದ್ದ ಟೈಯರ್‌ ಪ್ರಕರಣ ವನ್ನು ಬೆನ್ನತ್ತಿ ತಮಿಳುನಾಡಿನ ತಿರುಪತ್ತೂರು ಹಾಗೂ ತಿರುವಣ್ಣಾಮಲೈ ಜಿಲ್ಲೆಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 6ಲಕ್ಷ ರೂ ಬೆಲೆಬಾಳುವ ಟೈಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಭಿನಂದನೆ : ಉಪವಿಭಾಗ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳನ್ನು ಭೇದಿಸಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಗದು ಮತ್ತು ಅಭಿನಂದನಾ ಪತ್ರವನ್ನು ನೀಡಿ ಎಸ್ಪಿ ಅಭಿನಂದಿಸಿದರು. ಜಿಲ್ಲಾ ಪೊಲೀಸ್‌ ಅಪರ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್‌, ಡಿವೈಎಸ್‌ಪಿ ಹೆಚ್‌.ಸಿ. ಜಗದೀಶ್‌, ವೃತ್ತನಿರೀಕ್ಷಕ ಎಂ.ಆರ್‌. ಹರೀಶ್‌, ಪಟ್ಟಣಠಾಣೆ ಇನ್ಸ್‌ಪೆಕ್ಟರ್‌ ಕುಮಾರ್‌, ಇನ್ಸ್‌ಪೆಕ್ಟರ್‌ ಮಂಜುನಾಥ್‌, ಸಂಚಾರಿ ನಿರೀಕ್ಷಕ ಅರುಣ್‌ಸುಲಂಕಿ, ಸಬ್‌ ಇನ್ಸ್‌ಪೆಕ್ಟರ್‌ಗಳಾದ ವಸಂತ್‌ ಕುಮಾರ್‌, ಅಂಜನ್‌ ಕುಮಾರ್‌, ಚಿಕ್ಕನರಸಿಂಹಯ್ಯ, ಡಿ.ಆರ್‌.ಮಂಜುನಾಥ್‌ ಮತ್ತಿತರರಿದ್ದರು.

Advertisement

ವಿವಿಧ ಪ್ರಕರಣಗಳ ಬಗ್ಗೆ ಮಾಹಿತಿ
ಪೊಲೀಸರ ಕಾರ್ಯಾಚರಣೆಯಿಂದ 6ಲಕ್ಷ ಮೌಲ್ಯದ 20 ಕಂಪನಿಗಳ ಟೈರ್‌,28ಸಾವಿರ ಮೌಲ್ಯದ ಗಾಂಜಾ ಮತ್ತು 15.20ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು ಉಪವಿಭಾಗದ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ತಿಳಿಸಿದರು.

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಬಸ್‌ನಿಲ್ದಾಣದಲ್ಲಿ ಸಂಚಾರಿ ಅವ್ಯವಸ್ಥೆ ಹೆಚ್ಚಾಗಿದ್ದು ಬಸ್‌ನಿಲ್ದಾಣದ ಬಳಿಯಲ್ಲಿ ಖಾಸಗಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದು ಅವುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವ ಮೂಲಕ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸದೆ ಪಟ್ಟಣಿಗರ ಸುಗಮ ಸಂಚಾರಕ್ಕೆ ಸೂಕ್ತ ಕ್ರಮವಹಿಸಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next