Advertisement
ತಾಲೂಕಿನ ಟಿ.ಬೇಗೂರು ಗ್ರಾಮ ಪಂಚಾಯಿತಿಯ ಟಿ. ಬೇಗೂರು, ಮಾರೋಹಳ್ಳಿ, ಭುವನೇ ಶ್ವರಿನಗರದ ಗ್ರಾಮದ 1.5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗ ಮಿಸಿದ್ದ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿಯವರ ಎದುರು ಸಾರ್ವಜನಿಕರು ಹಾಗೂ ಸ್ಥಳೀಯ ಸದಸ್ಯರು ಪಿಡಿಒ ಉಷಾ ವರ್ತನೆಗಳನ್ನು ವಿರೋಧಿಸಿ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರ ಆರೋಪವನ್ನು ಪಿಡಿಒಗೆ ಪ್ರಶ್ನೆ ಮಾಡಿದ ಶಾಸಕರ ಎದುರು ಉತ್ತರ ನೀಡದೇ, ನಾನು ಶಾಸಕರ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ದರ್ಪ ತೋರಿದ್ದಾರೆ.
ಟಿ.ಬೇಗೂರು ಗ್ರಾಮ ಪಂಚಾಯಿತಿಗೆ ಪಿಡಿಒ ಉಷಾರವರು ಬಂದು 10 ತಿಂಗಳಾಗಿದೆ. ಒಂದು ದಿನವೂ ಸಹ ಸರಿಯಾದ ಸಮಯಕ್ಕೆ ಕಚೇರಿಗೆ ಬಂದಿಲ್ಲ. ಕೇಳಿದರೆ ಕಾರಣಗಳನ್ನು ಹೇಳುತ್ತಾರೆ. ಮೇಲಾಧಿಕಾರಿಗಳಿಗೆ ದೂರು ನೀಡಿ ಪ್ರಶ್ನೆ ಮಾಡಿದರೆ, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಮ್ಮ ಮಾವ, ನಾನು ಸಿಎಂ ಮಟ್ಟದಲ್ಲಿ ಮಾತನಾಡುವೆ ಎಂದು ಹೇಳಿ ಕೊಂಡು ನಮ್ಮ ಪಂಚಾಯಿತಿ ಅಭಿವೃದ್ಧಿಗೆ ಈ ಪಿಡಿಒ ಶಾಪವಾಗಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ಬಿ.ಕೆ ಮುನಿರಾಜು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಅವರು, ಆರ್ ಎಸ್ ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರು ದುರ್ಬಳಕೆ ಮಾಡಿಕೊಂಡು ಮೇಲಾಧಿಕಾರಿಗಳನ್ನು ಕೈಕಟ್ ಬಾಯ್ ಮುಚ್ಚು ಎಂಬ ಪರಿಸ್ಥಿತಿಗೆ ತಂದಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಎಪಿಎಂಸಿ ನಿರ್ದೇಶಕ ಬೂದಿಹಾಳ್ ಗೋವಿಂದ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಮತಾ, ಸದಸ್ಯರಾದ ಗಣೇಶ್, ಮಂಜುನಾಥ್. ಟಿಎಸ್, ಅರಿಶಿನಕುಂಟೆ ಮಂಜುನಾಥ್, ಬೂದಿಹಾಳ್ ಮಂಜುನಾಥ್, ಡಿಎಂಎಲ್ ಎನ್ ಮೂರ್ತಿ, ರಾಮಯ್ರೆಡ್ಡಿ, ಮುನಿಯಪ್ಪ ಹಾಗೂ ಮತ್ತಿತರರಿದ್ದರು.
ಪಿಡಿಒ ವಿರುದ್ಧ ಶಾಸಕ ಡಾ.ಶ್ರೀನಿವಾಸಮೂರ್ತಿ ಗರಂಗ್ರಾಪಂ ಪಿಡಿಒ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆದರೆ, ಟಿ.ಬೇಗೂರು ಗ್ರಾಪಂ ಪಿಡಿಒ ಉಷಾ ಮಧ್ಯಾಹ್ನ 12ಕ್ಕೆ ಕಚೇರಿಗೆ ಬರುವುದು, ಮನಸ್ಸಿಗೆ ಬಂದಂತೆ ಹೋಗುವುದು. ಈ ರೀತಿಯ ವರ್ತನೆಗಳ ಬಗ್ಗೆ ಸಾಕಷ್ಟು ದೂರು ಬಂದಿದೆ. ಮೇಲಾಧಿಕಾರಿಗೆ ತಿಳಿಸಿದರೂ ಕ್ರಮವಾಗಿಲ್ಲ. ಗುರುವಾರ ಸಹ ಅಭಿವೃದ್ಧಿ ಕಾಮಗಾರಿ ಚಾಲನೆಗೆ, ಸಮಯಕ್ಕೆ ಸರಿಯಾಗಿ ಆಗಮಿಸದೇ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದರ್ಪ ತೋರಿದ್ದಾರೆ. ಇಂತವರು ನಮ್ಮ ತಾಲೂಕಿನಲ್ಲಿ ಕಾರ್ಯ ನಿರ್ವ ಹಿಸುವುದು ಅವಶ್ಯಕತೆ ಇಲ್ಲ ಎಂದು ಪಿಡಿಒ ನಡೆಗೆ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಗರಂ ಆದರು.