Advertisement
ಪಟ್ಟಣ ಸಮೀಪದ ಮಾದವಾರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತಿ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ದೇಶದಲ್ಲಿ ಬೆಂಗಳೂರು ಒಂದು ಹೆಮ್ಮೆಯ ರಾಜ್ಯ ರಾಜಧಾನಿಯಾಗುವ ಜೊತೆ ಬುದ್ದಿವಂತಿಕೆಯ ರಾಜಧಾನಿಯಾಗಿದೆ ಎಂದರು. ಕಾವೇರಿ ಸಮಸ್ಯೆಗೆ ಮುಕ್ತಿ: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾವೇರಿ ನದಿಯ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ದಕ್ಷಿಣ ಭಾರತದ ಕೃಷ್ಣ, ಗೋದಾವರಿ, ಪೆನ್ನಾ ಮೂಲಕ ಕಾವೇರಿ ನದಿಯವರೆಗೂ ನದಿಜೋಡಣೆಯ ಯೋಜನೆ ಸಿದ್ಧವಾಗಿದ್ದು ಕೆಲಸ ಆರಂಭವಾಗಲಿದೆ. ಅದೇ ರೀತಿ ಅನೇಕ ನದಿಗಳ ಜೋಡಣೆ ಮೂಲಕ ರಾಜ್ಯಗಳ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಎಲ್‌ಎನ್‌ಜಿ ಬಳಸಿ : ಕಟ್ಟಡ ನಿರ್ಮಾಣದ ಯಂತ್ರೋಪಕರಣಗಳು ಹಾಗೂ ವಾಹಕ ಉತ್ಪಾದಕ ಸಂಸ್ಥೆಗಳು ಕಡ್ಡಾಯವಾಗಿ ಎಲ್‌ಎನ್‌ಜಿ ಬಳಸಿದರೆ ವಾಯುಮಾಲಿನ್ಯ ನಿಯಂತ್ರಣ ಮಾಡಬಹುದು. ಇಂಧನದ ಬೆಲೆ ಕಡಿಮೆ ಇದೆ ಅದೇ ರೀತಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ , ಏಷ್ಯಾದ ಅತಿ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ರಾಜ್ಯದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ, ಅದೇ ರೀತಿ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಯಂತ್ರಗಳ ತಯಾರಿಕೆಗೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ, ರಾಜ್ಯ ಸರ್ಕಾರ ಎಲ್ಲಾ ಸಹಕಾರ ಮಾಡಲಿದ್ದು, 5 ದಿನದ ಪ್ರದರ್ಶನ ಯಶಸ್ವಿಯಾಗಲಿ ಎಂದು ಆಶಿಸಿದರು.
ಪ್ರಶಸ್ತಿ ಪ್ರಧಾನ: ದೇಶದಲ್ಲಿ ಹೊಸ ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೆ ಸಹಕಾರಿಯಾದ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣದ ಯಂತ್ರೋಪಕರಣಗಳ ತಯಾರಿಯಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಧಾನ ಮಾಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್ ಹಾಗೂ ಅನೇಕ ಪ್ರತಿಷ್ಠಿತ ಕಂಪನಿಯ ಮಾಲೀಕರು, ಸಿಇಓಗಳು ಉಪಸ್ಥಿತರಿದ್ದರು.