Advertisement

NEKRTC ಮಾಸಿಕ ಬಸ್ ಪಾಸ್ ಅವಧಿ ವಿಸ್ತರಣೆ

09:22 PM Jun 21, 2021 | Team Udayavani |

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕಳೆದ‌ ಏಪ್ರಿಲ್ 7ರಿಂದ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ ಅವಧಿ ಹಾಗೂ ಏಪ್ರಿಲ್ 28ರಿಂದ ಘೋಷಿಸಲಾದ ಕೋವಿಡ್ ಲಾಕ್‍ ಡೌನ್ ಪ್ರಾರಂಭದ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಮಾಸಿಕ ಬಸ್ ಪಾಸುಗಳು ಲಾಕ್ ಡಾನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ವ್ಯವಾಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ್ ತಿಳಿಸಿದ್ದಾರೆ.

Advertisement

ಇಂತಹ ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಅಥವಾ ಗರಿಷ್ಟ 18 ದಿನಗಳವರೆಗೆ ಅಂದರೆ ಜುಲೈ 8ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಯೋಗದ ಮೂಲ ನೇಪಾಳವೇ ಹೊರತು, ಭಾರತ ಅಲ್ಲ : ಒಲಿ ಪ್ರಲಾಪ!

ಇದಲ್ಲದೆ ಕಳೆದ ಏಪ್ರಿಲ್ 8 ರಿಂದ 27ರ ಅವಧಿಯಲ್ಲಿ ಮಾಸಿಕ ಬಸ್ ಪಾಸುಗಳನ್ನು ಪಡೆದಂತಹ‌ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಆದೇಶಿಸಲಾಗಿದ್ದು, ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next