Advertisement
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಿ.ವಸಂತ ಪೈ, ಮಾತಾಡಿ ಈ ದೇವಾಲಯವು ಸೀಮೆಯ ಒಂದು ಪ್ರಸಿದ್ಧ ಕಾರಣಿಕದ ಕ್ಷೇತ್ರವಾಗಿದ್ದು, ನೆಕ್ರಾಜೆ ಗ್ರಾಮಸ್ಥರ ಗ್ರಾಮ ದೇಗುಲವೆಂದೇ ಪ್ರತೀತವಾಗಿದೆ.ನೆಕ್ರಾಜೆ ನಿವಾಸಿಗಳು ನೀಡುತ್ತಿರುವ ಪೂರ್ಣ ಸಹಕಾರ ಮತ್ತು ಉತ್ಸಾಹ ಇಲ್ಲಿನ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆದು ಪುನರ್‌ಪ್ರತಿಷ್ಠಾ ಕಾರ್ಯವನ್ನು ಕಾಣಲಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಮಹಿಳಾ ಸಂಘ ನೆಕ್ರಾಜೆ, ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ನೆಕ್ರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಹಾಗೂ ಕ್ಲಬ್‌ಗಳ ಪದಾಧಿಕಾಗಳು ಹಾಗೂ ಸದಸ್ಯರು ದೇವಸ್ಥಾನದ ಆವರಣದಲ್ಲಿ ಉಪಸ್ಥಿತರಿದ್ದರು. ಸದ್ಯದಲ್ಲಿಯೇ ಪ್ರಾರಂಭ
ನೆಕ್ರಾಜೆ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಸದ್ಯದಲ್ಲಿಯೇ ಪ್ರಾರಂಭವಾಗಲಿದ್ದು ಶಿಲೆಯನ್ನು ಕ್ಷೇತ್ರಕ್ಕೆ ತಲುಪಿಸಲಾಗಿದೆ. ನೆಕ್ರಾಜೆಯ ಗ್ರಾಮದ ದೇವಸ್ಥಾನ ವಾಗಿದ್ದು ಸಂತಾನ ಗೋಪಾಲಕೃಷ್ಣ ಎಂದೇ ಖ್ಯಾತಿ ಪಡೆದಿದೆ. ಅತಿ ಶೀಘ್ರದಲ್ಲಿ ಕೆಲಸವನ್ನು ಪೂರ್ತಿಗೊಳಿಸುವ ಯೋಜನೆ ಹಾಕಲಾಗಿದ್ದು ಭಕ್ತ ಜನರ ಸಹಕಾರದಿಂದ ಅದು ಸಾಧ್ಯವಾಗಲಿದೆ.ಶಾಶ್ವತ ಚಪ್ಪರ, ಸುಸಜ್ಜಿತ ಅಡುಗೆ ಶಾಲೆ, ನೆಲಕ್ಕೆ ಹಾಸುಗಲ್ಲು, ಕಾರ್ಯಾಲಯ, ಶಾಶ್ವತ ವೇದಿಕೆ, ನೀರಿನ ಟ್ಯಾಂಕ್, ಶೌಚಾಲಯ ಕೆಲಸಗಳು ನಡೆಯಬೇಕಿದೆ.
– ಗಣೇಶ ವತ್ಸ ನೆಕ್ರಾಜೆ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ