Advertisement

ರಾಜಕೀಯಕ್ಕೆ ಸಾಹಿತ್ಯ ಪ್ರೇರಣೆಯಾಗಲಿ

11:52 AM Jan 27, 2017 | |

ಚನ್ನಗಿರಿ: ರಾಜಕೀಯಕ್ಕೆ ಸಾಹಿತ್ಯದ ಪ್ರೇರಣೆ ಅಗತ್ಯವಿದ್ದು, ಆಡಳಿತರೂಢ ಪಕ್ಷ ಹಾಗೂ ಪ್ರತಿಪಕ್ಷಗಳು ಸಾಹಿತ್ಯದಲ್ಲಿನ ಉತ್ತಮ ಅಂಶಗಳನ್ನು ಪಾಲಿಸುವ ಜತೆಗೆ ಜೀವನದಲ್ಲಿ ಅಳವಡಿಸಕೊಳ್ಳಬೇಕಿದೆ ಎಂದು ಸಂಯುಕ್ತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ಹೇಳಿದ್ದಾರೆ. 

Advertisement

ಪಟ್ಟಣದ ಲೋಹಿಯ ಭವನದಲ್ಲಿ ಗುರುವಾರ ಸಂಯುಕ್ತ ಜನತಾದಳ ಪಕ್ಷದ ಯುವ ಸದಸ್ಯತ್ವ ಅಭಿಯಾನ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಜನತೆ ಪರ್ಯಾಯ ರಾಜಕೀಯವನ್ನು ಬಯಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಂಯುಕ್ತ ಜನತಾದಳ ಪಕ್ಷಕ್ಕೆ ಯುವ ಸಮೂಹ ಸ್ವಯಂ ಪ್ರೇರಿತವಾಗಿ ಬೆಂಬಲಿಸುತ್ತಿದ್ದಾರೆ ಎಂದರು. 

ಯುವಕರು ರಾಜಕೀಯದಲ್ಲಿ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಪರ್ಯಾಯ ಶಕ್ತಿಯನ್ನು ಕಾಣಬಹುದು. ಸದ್ಯದ ಪರಿಸ್ಥಿತಿಯಲ್ಲಿ ಯುವ ಜನತೆಗೆ ಉದ್ಯೋಗವಿಲ್ಲದೇ ಅಲೆದಾಡುವಂತಹ ಸ್ಥಿತಿಯಿದೆ. ಆದರೆ ಅಧಿಧಿಕಾರಕ್ಕೆ ಬರುವ ಸರ್ಕಾರಗಳು ಇಲ್ಲಿಯವರೆಗೆ ಉದ್ಯೋಗ ಸೃಷ್ಟಿಸುವಂತಹ ಕೆಲಸವನ್ನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಜೆಡಿಯು ಪಕ್ಷದಲ್ಲಿ ಸಾಮೂಹಿಕ ನಾಯಕತ್ವಕ್ಕೆ ಬೆಲೆಯಿದೆ. ಇಲ್ಲಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರವಾಸ ಕೈಗೊಂಡಿದ್ದು, 2018ರ ಚುನಾವಣೆಯಲ್ಲಿ ಜೆಡಿಯು ತನ್ನ ಬಲದಿಂದ ರಾಜ್ಯದಲ್ಲಿ ಪಕ್ಷ ಆಡಳಿತಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮಹಿಮಾ ಜೆ. ಪಟೇಲ್‌ ಮಾತನಾಡಿ, ರಾಜಕೀಯ ರಂಗದಲ್ಲಿ ಯುವಕರಿಗೆ ಸ್ವಾತಂತ್ರ ಬೇಕಿದೆ. ಚುನಾವಣೆ ಸಂದರ್ಭದಲ್ಲಿ ಯವ ಸಮೂಹವನ್ನು ಬಳಸಿಕೊಳ್ಳುವ ಪಕ್ಷಗಳು ನಂತರ ಅವರನ್ನು ಕಡೆಗಣಿಸುತ್ತಿದ್ದಾರೆ. ಸಮಾಜದಲ್ಲಿ ಯುವ ಶಕ್ತಿಯಿಂದ ಮಾತ್ರ ಬದಲಾವಣೆ ಮಾಡಲು ಸಾಧ್ಯ.

Advertisement

ರೈತರು ಬೆಳೆದಂತಹ ಪ್ರತಿಯೊಂದು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ನಿಗದಿ ಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೂ ರೈತರ ವಿಚಾರದಲ್ಲಿ ಪ್ರತಿಯೊಂದು ಸರ್ಕಾರ ವಿಫಲತೆ ಕಂಡಿದೆ ಎಂದರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗವನ್ನು ನೀಡಲು ಸಾಧ್ಯವಿಲ್ಲ.

ಇಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಶಿಕ್ಷಣವನ್ನು ಪಡೆದವರು ಉದ್ಯೋಗಕ್ಕೆ ಅಲೆದಾಡುವಂತಹ ತಿ ನಿರ್ಮಾಣವಾಗಿದೆ. ಮೊದಲು ಸ್ವಯಂ ಉದ್ಯೋಗ  ಸೃಷ್ಟಿಯತ್ತ ನಾವುಗಳು ದಾಪುಗಾಲು ಹಾಕಬೇಕು. ಅದಕ್ಕೆ  ಪೂರಕವಾಗಿ ಮೊದಲು ತಾಲೂಕಿನ ಅಭಿವೃಧಿದ್ಧಿಯ ಬಗ್ಗೆ ಸಾಕಷ್ಟು ಆಲೋಚನೆಗಳನ್ನು ಒಳಗೊಂಡಿದೆ ಎಂದರು. 

ಜಿಪಂ ಸದಸ್ಯ ತೇಜಸ್ವಿ ಪಟೇಲ್‌, ಬುಳ್ಳ ಸಾಗರದ ನಾಗರಾಜ್‌, ಅಜ್ಜಿಹಳ್ಳಿ ಆರ್‌.ಎಂ ರವಿ, ಜೆಡಿಯು ಮುಖಂಡರಾದ ಚಿನ್ಮಯ, ರಾಜ್ಯ ಜೆಡಿಯು ಉಪಾಧ್ಯಕ್ಷ ದೊಡ್ಡಣ್ಣ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್‌, ಜಗದೀಶ್‌, ರಮೇಶ್‌, ಭೋಜರಾಜ್‌, ಸಿದ್ದರಾಮಯ್ಯ, ಉಸ್ಮಾನ್‌ ಷರೀಫ್‌, ರಂಗಸ್ವಾಮಿ ಮತ್ತಿತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next