ಕೆ.ಆರ್.ನಗರ: ಸಕಾಲದಲ್ಲಿ ಮಳೆಯಾಗಿ ರೈತರ ಸಂಕಷ್ಟಗಳನ್ನು ನಿವಾರಣೆಯಾಗಲಿ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿರುವ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಅಶ್ವಥಕಟ್ಟೆ ಮತ್ತು ನಾಗಪ್ರತಿಷ್ಠಾಪನಾ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಬರಗಾಲದಲ್ಲಿ ಸಿಲುಕಿದ್ದು ಇಂತಹ ಲೋಕ ಕಲ್ಯಾಣ ಮಾಡುವ ಮೂಲಕ ರೈತರು ತೊಂದರೆಗಳಿಂದ ಹೊರ ಬರಲಿ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲಲ್ಲಿ, ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದರು.
ಉಳ್ಳವರು ಆಡಂಬರ ಮದುವೆಗಳಿಗೆ ಕಡಿವಾಣ ಹಾಕಿ ಸರಳ ಸಾಮೂಹಿಕ ವಿವಾಹ ಮಾಡಿ ನೊಂದವರಿಗೆ ಸಹಾಯಕ್ಕೆ ಮುಂದಾಗಬೇಕು. ರಾಜ್ಯದ ಜನತೆ ರಾಷ್ಟೀಯ ಪಕ್ಷಗಳಿಗೆ ಅಧಿಕಾರ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಪ್ರಾದೇಶಿಕ ಪಕ್ಷ ಬಡವರ ರೈತರ ಪರವಾಗಿ ಸದಾ ಇರುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಮಾತನಾಡಿ, ಮನುಷ್ಯ ದಿನ ನಿತ್ಯದ ಕೆಲಸಗಳ ಒತ್ತಡದಲ್ಲಿ ಮನಶಾಂತಿಗಾಗಿ ಇತಂಹ ಧಾರ್ಮಿಕ ಕಾರ್ಯಕ್ರಮ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಬೇಕು. ಈ ಯುವಕ ಸಂಘದವರು ನೊಂದವರಿಗೆ ಹಾಗೂ ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ನಿಜವಾದ ಫಲಾನುಭವಿಗಳಿಗೆ ದೊರಕಿಸಿಕೊಡುವುದರ ಜತೆಗೆ ಆರೋಗ್ಯ ಶಿಬಿರಗಳನ್ನು ನಡೆಸಲಿ ಎಂದು ಸಲಹೆ ನೀಡಿದರು.
ಯುವಕ ಸಂಘದವರು ಬಡಾವಣೆಯ ವಿವಿಧ ಸಮಾಜದ 25 ಹಿರಿಯರನ್ನು ಸನ್ಮಾನಿಸಿದರು. ನೂತನ ನಾಗಪ್ರತಿಷ್ಠಪನೆ ಸೇವಾರ್ಥ ನೀಡಿದ ನೇತ್ರಾವತಿನಾಗೇಗೌಡ ದಂಪತಿ, ಗುತ್ತಿಗೆದಾರ ನಾಗೇಶರನ್ನು ಅಭಿನಂದಿಸಿದರು. ಪುರಸಭಾ ಅಧ್ಯಕ್ಷೆ ಕವಿತಾ , ಜಿಪಂ ಸದಸ್ಯರಾದ ಡಿ. ರವಿಶಂಕರ್, ಅಮಿತ್ ವಿ.ದೇವರಹಟ್ಟಿ, ಪುರಸಭಾ ಸದಸ್ಯರು ನಟರಾಜು, ಕೆ.ಎಲ್.ಕುಮಾರ್, ಉಮೇಶ್, ಮಾಜಿ ಸದಸ್ಯ ಯೋಗಾನಂದ, ಶಿಲ್ಪ,
ಧರ್ಮಸ್ಥಳ ಸಂಯೋಜನಾಧಿಕಾರಿ ಬಿ. ಅಶೋಕ್, ನಾಗೇಶ್ ಗುತ್ತಿಗೆದಾರರು, ಹೊಸಹಳ್ಳಿ ವೆಂಕಟೇಶ್, ಮಹರ್ಷಿ ವಿದ್ವಾನ್ ಶ್ರೀನಿವಾಸ್ ಭಟ್ಟರು, ಜಿ. ಪ್ರಾಣೇಶ್, ಗೀತಾ ಮಹಿಳಾ ಸಂಘ, ಅಶ್ವಥ್‌ನಾರಾಯಣ್, ಮಾರುತಿ ಯುವಕರ ಸಂಘದ ಗೌತಮ್‌ಜಾದವ್, ಧನುಷ್, ನತೀಶ್‌ಪಾಂಡೆ, ಭರತ್, ಗೋಪಿ, ಅಂಗಡಿಲೋಕೇಶ್, ಕೆಂದಮಂಜು, ಪುನೀತ್, ರಾಮು, ನರೇಂದ್ರಬಾಬು, ರಾಜು, ರಾಕಿ, ಉಮೇಶ್ ಇದ್ದರು.