Advertisement

ಬೀದಿಗೆ ಬಿದ್ದ ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು

07:57 PM Jul 19, 2021 | Team Udayavani |

ರಾಮದುರ್ಗ: ಮರಳಿ ನೆರೆ ಹಾವಳಿ ಹೊಸ್ತಿಲಿಗೆ ಬಂದರೂ ನೆರೆ ಸಂತ್ರಸ್ತರಿಗೆ ಸಿಗದ ಸೂರು. ಇದು ತಾಲೂಕಿನ ಸುರೇಬಾನ ಸಮೀಪದ ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರ ಗತಿ.

Advertisement

ಕಳೆದ ಎರಡು ವರ್ಷಗಳಿಂದ ಸತತವಾಗಿ ಅಬ್ಬರಿಸುತ್ತಿರುವ ಮಲಪ್ರಭಾ ನದಿಗೆ ನೆರೆ ಹಾವಳಿಗೆ ತುತ್ತಾದ ನದಿ ಪಾತ್ರದ ಗ್ರಾಮಸ್ಥರ ಬದುಕು ಈಗ ಬೀದಿಗೆ ಬಂದಿದೆ. ಹಂಪಿಹೊಳಿ ಗ್ರಾಮದ ಒಂಬತ್ತು ದಲಿತ ಕುಟುಂಬಗಳಿಗೆ ಇದುವರೆಗೂ ಶಾಶ್ವತವಾಗಿ ನೆಲೆ ಇಲ್ಲದಂತಾಗಿದೆ. ಶುಕ್ರವಾರ ರಾಮದುರ್ಗ ತಹಶೀಲ್ದಾರ್‌ ನೇತೃತ್ವದಲ್ಲಿ ಗೊಣ್ಣಾಗರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಮಾರಡಗಿ ಗ್ರಾಮಸ್ಥರಿಗಾಗಿ ನಿರ್ಮಿಸಿರುವ ಸಂತ್ರಸ್ತರ ಮನೆಗಳಲ್ಲಿ ಹಂಪಿಹೊಳಿ ಗ್ರಾಮಸ್ಥರು ನೆಲೆಸಿದ್ದಾರೆ ಎಂಬ ಕಾರಣಕ್ಕೆ ಆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಮನೆಯಿಂದ ಹೊರಹಾಕಿದ ಘಟನೆ ನಡೆದಿದೆ.

ಮಾರಡಗಿ ಗ್ರಾಮಸ್ಥರಿಗೆ ಈ ಹಿಂದೆ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಹಕ್ಕು ಪತ್ರ ಪಡೆದ ಫಲಾನುಭವಿಗಳು ಅಲ್ಲಿ ವಾಸವಿರದ ಕಾರಣ, ಕಳೆದ ವರ್ಷ ತಹಶೀಲ್ದಾರ್‌ ಗಿರೀಶ ಸ್ವಾಧಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಾವು ವಾಸವಿದ್ದೇವೆ ಎಂದು ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು ಹೇಳುತ್ತಾರೆ. ರಾಮದುರ್ಗ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಪೊಲೀಸರ ಸಹಕಾರದಿಂದ ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಮಳೆಗಾಲವಾದ್ದರಿಂದ ಅವರು ನಮಗೆ ಬೇರೆಡೆ ವಾಸಿಸಲು ಅವಕಾಶ ಮಾಡಿ ಮಾನವೀಯತೆ ಮೆರೆಯಬೇಕಿತ್ತು ಎಂತಾರೆ ದಲಿತ ಕುಟುಂಬದ. ರಾಮದುರ್ಗ ವರು.

Advertisement

Udayavani is now on Telegram. Click here to join our channel and stay updated with the latest news.

Next