Advertisement

ಕಾಪು ತಾಲೂಕಿನ ವಿವಿಧೆಡೆ ನೆರೆ

01:15 AM Aug 14, 2019 | sudhir |

ಕಾಪು: ಮಂಗಳವಾರ ದಿನವಿಡೀ ಸುರಿದ ಮಳೆಯಿಂದ ಕಾಪು ತಾಲೂಕಿನ ಮಜೂರು, ಬೆಳಪು, ಬಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಮಂಗಳವಾರ ನೆರೆಯ ಭೀತಿ ಎದುರಾಗಿದೆ.

Advertisement

ಮಜೂರು ಗ್ರಾಮದ ಕರಂದಾಡಿ ಮತ್ತು ಕಲ್ಲುಗುಡ್ಡೆ ಪ್ರದೇಶದಲ್ಲಿ ನೆರೆ ಭೀತಿ ಹಿನ್ನೆಲೆಯಲ್ಲಿ ಕೆಲವರನ್ನು ತೆರವು ಮಾಡಲಾಗಿದೆ.

ಬಡಾ ಗ್ರಾ.ಪಂ. ವ್ಯಾಪ್ತಿಯ ಭಾಸ್ಕರ ನಗರ, ಕಟ್ಟಿಂಗೇರಿ ಪರಿಸರದಲ್ಲಿ ಕೃತಕ ನೆರೆ ಭೀತಿ ಎದುರಾಗಿದ್ದು, ಜಲಾವೃತಗೊಂಡಿದ್ದ ಮನೆಗಳಿಗೆ ನೀರು ನುಗ್ಗದಂತೆ ಮುನ್ನೆಚ್ಚರಿಕೆ ಕೈಗೆತ್ತಿಕೊಳ್ಳಲಾಗಿದೆ.

ಮೂಳೂರು ಕರಾವಳಿ ರಸ್ತೆಯ ಭಜನ ಮಂದಿರ ಪ್ರದೇಶದಲ್ಲಿ ಭಾಗದಲ್ಲಿ ತೋಟಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ಸೋಮವಾರ ಮಧ್ಯರಾತ್ರಿ ಎಲ್ಲೂರು ವಿಶ್ವೇಶ್ವರ ದೇಗುಲ ಅಂಗಳಕ್ಕೆ ನೀರು ನುಗಿತ್ತು.

ಕುಂದಾಪುರ: 6 ಮನೆ ಹಾನಿ
ಕುಂದಾಪುರ: ಭಾರೀ ಗಾಳಿ – ಮಳೆಯಿಂದಾಗಿ ಕುಂದಾಪುರ, ಬೈಂದೂರು ತಾಲೂಕಿನಲ್ಲಿ 6 ಮನೆಗಳಿಗೆ ಹಾನಿಯಾಗಿದ್ದು, 2 ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿ ಸಂಭವಿಸಿದೆ.

Advertisement

ದಕ್ಷಿಣ ಕನ್ನಡ: ಮಳೆ ಕಡಿಮೆ
ಮಂಗಳೂರು: ಹಲವು ದಿನಗಳಿಂದ ಸಮಸ್ಯೆಗಳನ್ನೇ ಸೃಷ್ಟಿಸಿದ್ದ ಮಳೆ ಮಂಗಳವಾರ ಕಡಿಮೆಯಾಗಿತ್ತು.
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರ ಪೈಕಿ ಬಹುತೇಕ ಜನರು ಸದ್ಯ ಮನೆಗಳತ್ತ ವಾಪಸಾಗಿದ್ದಾರೆ.

ಉಡುಪಿ: ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ಮಂಗಳವಾರ ಮಧ್ಯಾಹ್ನದ ಅನಂತರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಯಿತು. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ರಿಂದ ಮಂಗಳವಾರ ಬೆಳಗ್ಗೆ 8.30ರ ಅವಧಿಯಲ್ಲಿ 77 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 41 ಮಿ.ಮೀ.

ಶಾಲೆಗಳಿಗೆ ಸೂಚನೆ
ಮಳೆ ಬರುತ್ತಿದೆ ಎಂಬ ಕಾರಣಕ್ಕೆ ಯಾವುದೇ ಶಾಲೆಯವರು ವಿದ್ಯಾರ್ಥಿಗಳನ್ನು ನಿಗದಿತ ಸಮಯಕ್ಕಿಂತ ಮೊದಲು ಮನೆಗೆ ಕಳುಹಿಸಬಾರದು. ಇದು ಮಕ್ಕಳ ಹೆತ್ತವರ ಗಮನಕ್ಕೆ ಬಾರದೆ ಅನಾಹುತ ಉಂಟಾಗಬಹುದು ಎಂಬುದಾಗಿ ಎಲ್ಲ ಶಾಲಾ ಮುಖ್ಯಸ್ಥರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next