Advertisement

ಪಿಂಪ್ರಿ ನೆಹರೂ ನಗರ ಅಯ್ಯಪ್ಪ  ಮಂದಿರ:ಮಹಾ ಶಿವರಾತ್ರಿ,ಯಕ್ಷಗಾನ

02:03 PM Feb 21, 2017 | |

ಪುಣೆ: ಶ್ರೀಅಯ್ಯಪ್ಪ ಸ್ವಾಮೀ ಮಂದಿರ  ನೆಹರೂ ನಗರ ಪಿಂಪ್ರಿ ಇಲ್ಲಿ ಫೆ. 24ರಂದು ಶಿವರಾತ್ರಿ ಆಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ  ಕಾರ್ಯಕ್ರಮ ಗಳೊಂದಿಗೆ ಜರಗಲಿದೆ.

Advertisement

ಶಿವರಾತ್ರಿ ಮಹೋತ್ಸವವು ಪ್ರಾತಃಕಾಲ ಆರಂಭಗೊಂಡು ವಿಶೇಷ ಪೂಜೆ, ಸಂಜೆ 4ರಿಂದ  ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 6ರಿಂದ   ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರ ನುರಿತ ಕಲಾವಿದರು, ಅತಿಥಿ ಕಲಾವಿದರ ಕೂಡುವಿಕೆಯಿಂದ  ಹೆಸರಾಂತ ಭಾಗವತರಾದ  ರವಿಂದ್ರ ಹೊಸಂಗಡಿ ಅವರ ಭಾಗವತಿಕೆಯಲ್ಲಿ ಭಕ್ತ ಸುಧನ್ವ ಎಂಬ ಪೌರಾಣಿಕ  ಯಕ್ಷಧಿಗಾನ ಪ್ರದರ್ಶನಗೊಳ್ಳಲಿದೆ.

ಮುಖ್ಯ ಹಿಮ್ಮೇಳದಲ್ಲಿ ಜಗದೀಶ ಶೆಟ್ಟಿ ಏಳಿಂಜೆ ಮತ್ತು ಆನಂದ ಶೆಟ್ಟಿ  ಇನ್ನ  ಅವರು ಸಹಕರಿಸಲಿದ್ದು, ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಲ್ಲಿ ಶ್ರೀನಿವಾಸ್‌ ರೈ ಕಡಬ, ಹಾಸ್ಯದಲ್ಲಿ ರಾಜ ತುಂಬೆ  ಮತ್ತು ಮುಖ್ಯ ಭೂಮಿಕೆಯಲ್ಲಿ ಗೋವಿಂದ ಭಟ್‌ ನಿಡ್ಲೆ, ಉದಯ್‌ ಕುಮಾರ್‌ ಅಡ್ಯನಡ್ಕ, ವಿಟಲ್‌ ಪ್ರಭು, ರಾಮಣ್ಣ ರೈ ಪುತ್ತೂರು, ರಘುನಾಥ್‌ ನಲ್ಲೂರು, ಮನೋಜ್‌ ಹೆಜಮಾಡಿ ಹಾಗೂ ಇತರ‌ರು ಸಹಕರಿಸಲಿದ್ದಾರೆ. ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ.

ಪ್ರತಿ ವರ್ಷ ಅಯ್ಯಪ್ಪ ಮಂಡಲದ ವತಿಯಿಂದ ಯಕ್ಷಗಾನ ಕಾರ್ಯಕ್ರಮವು ನಡೆದುಕೊಂಡು ಬರುತ್ತಿದ್ದು  ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು, ಕಲಾಭಿಮಾನಿಗಳು ಪಾಲ್ಗೊಂಡು ಸಹಕರಿಸುವಂತೆ ನೆಹರೂ ನಗರ ಅಯ್ಯಪ್ಪ ಮಂಡಲಿಯ  ಅಧ್ಯಕ್ಷ  ಜಯಾನಂದ ಶೆಟ್ಟಿ ಮತ್ತು ಮಂದಿರದ ಪದಾಧಿಕಾರಿಗಳು ಮತ್ತು      ಪುಣೆ  ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿಯ  ಪರವಾಗಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು   ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next