Advertisement

ನೆಹರು ವಿಶ್ವಕಂಡ ಅಪರೂಪದ ದಾರ್ಶನಿಕ

11:35 AM May 28, 2022 | Team Udayavani |

ಕಲಬುರಗಿ: ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ವಿಶ್ವ ಕಂಡ ಅಪರೂಪದ ದಾರ್ಶನೀಕ ರಾಜಕಾರಣಿ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ನೆಲೋಗಿ ಹೇಳಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪಂಡಿತ್‌ ಜವಾಹರಲಾಲ್‌ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಮೊದಲ ಮತ್ತು ದೀರ್ಘಾವಧಿ ಪ್ರಧಾನ ಮಂತ್ರಿ ನೆಹರು. ಅವರ ದೂರದೃಷ್ಟಿಯಿಂದ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿಸಲು ಸುದೀರ್ಘ‌ ಹೋರಾಟದಲ್ಲಿ ಭಾಗವಹಿಸಿದ್ದ ನೆಹರು, ಯುವ ಭಾರತ ಪ್ರಯತ್ನಗಳಿಂದ ಮಾತ್ರವೇ ರೂಪುಗೊಳ್ಳುತ್ತದೆಂದು ನಂಬಿದ್ದರು ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ ಮಾತನಾಡಿ, 1950ರಲ್ಲಿ ವಲ್ಲಭಭಾಯಿ ಪಟೇಲ್‌ ಅವರ ಮರಣದ ನಂತರ, ಕಾಂಗ್ರೆಸ್‌ನಲ್ಲಿ ತಮ್ಮ ಸಹೋದ್ಯೋಗಿಗಳ ನಡುವೆ ಎತ್ತರಕ್ಕೆ ಏರಿದರು. ಶಿಕ್ಷಣ ಸಂಸ್ಥೆಗಳು, ಉಕ್ಕಿನ ಸ್ಥಾವರಗಳು ಮತ್ತು ಅಣೆಕಟ್ಟುಗಳಿಂದ ಶಕ್ತಿಯುತವಾದ ಭಾರತದ ಬಗ್ಗೆ ಅವರ ದೃಷ್ಟಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿತ್ತು. ಅಂತಹ ಶಕ್ತಿ ಅವರಿಗೆ ಮಾತ್ರವೇ ಇತ್ತು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಭಾರತವು ರೋಮಾಂಚಕ ಪ್ರಜಾಪ್ರಭುತ್ವ, ಕೈಗಾರಿಕಾ ಶಕ್ತಿ ಕೇಂದ್ರ, ಜ್ಞಾನದ ಪಾಲುದಾರ, ಜಾಗತಿಕವಾಗಿ ಗೌರವಾನ್ವಿತ ಮಿಲ್ಟ್ರಿ ಶಕ್ತಿ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಆವಿಷ್ಕಾರದ ಹೆಗ್ಗಳಿಕೆ ನೆಹರು ಅವರಿಗೆ ಸಲ್ಲಬೇಕು ಎಂದರು.

Advertisement

ದಕ್ಷಿಣ ನಗರ ಬ್ಲಾಕ್‌ ಸಮಿತಿ ಹಿಂದುಳಿದ ವಿಭಾಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಹಿಳಾ ಅಧ್ಯಕ್ಷೆ ಲತಾ ರವಿ ರಾಠೊಡ, ರೇಣಿಕಾ ಸಿಂಗೆ ಮತ್ತಿತರರು ಇದ್ದರು.

ಮಹಾತ್ಮ ಗಾಂಧಿ ಅವರ ರಾಜಕೀಯ ಉತ್ತರಾಧಿಕಾರಿ ಆಗಿದ್ದ ನೆಹರು ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದ್ದರು. ನೆಹರು ಅವರ ಮೊದಲ ಬದ್ಧತೆ ಭಾರತವನ್ನು ಸ್ವಾವಲಂಬಿ, ಆರ್ಥಿಕತೆ ರಾಷ್ಟ್ರವನ್ನಾಗಿಸುವುದೇ ಆಗಿತ್ತು. ಆಧುನಿಕ ಕಲಿಕೆ ಮತ್ತು ದೈತ್ಯ ಸಾರ್ವಜನಿಕ ವಲಯದ ಉದ್ಯಮಗಳ ದೇವಾಲಯಗಳನ್ನು ಸ್ಥಾಪಿಸಿದರು. ದೂರ ದೃಷ್ಟಿಯಿಂದ ಭಾರತ ಪ್ರಕಾಶಿಸುವಂತೆ ಮಾಡಿದ್ದರು. ಶರಣಕುಮಾರ ಮೋದಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next