Advertisement

ನೆಹರು ದೇಶ ಕಂಡ ಮಹಾನ್‌ ತಜ್ಞ

04:46 PM Nov 15, 2017 | Team Udayavani |

ನಾರಾಯಣಪುರ: ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರು ಅವರು ದೇಶ
ಕಂಡ ಮಹಾನ್‌ ವಿದೇಶಾಂಗ ತಜ್ಞ ಎಂದು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಾಣಗೇರ ಹೇಳಿದರು. ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ತೆಲೆದೋರಿದ ಬಡತನ, ವಲಸೆ, ಆಹಾರ ಕೊರತೆ ಇನ್ನಿತರ ಅನೇಕ ಸಮಸ್ಯೆಗಳ ಪರಿಹರಿಸಲೆಂದು ಯೋಜನಾ ಆಯೋಗವನ್ನು ರಚಿಸಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ
ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಮಹಾನ್‌ ನಾಯಕರಾದ ಅವರು, ಮಕ್ಕಳ ಮೇಲಿನ ಅಪಾರ ಪ್ರೀತಿಯ ಕಾರಣದಿಂದಲೇ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಉಪಪ್ರಾಚಾರ್ಯ ಶಂಕರ ಲಮಾಣಿ, ಉಪನ್ಯಾಸಕ ದ್ಯಾಮಣ್ಣ ನಾಲತವಾಡ, ಸಂಗಣ್ಣ ಹಗರಗುಂಡ ಪಂಡಿತ ನೆಹರು ಅವರ ಜೀವನ ಕುರಿತು ಮಾತನಾಡಿದರು. ಉಪನ್ಯಾಸಕಿ ಜಯಮಂಗಲ ಗಾರಂಪಳ್ಳಿ, ಶೋಭಾ, ದಯಾನಂದ
ಹಿರೇಮಠ, ಸಂಗಯ್ಯ ಬಿಕ್ಷಾವತಿಮಠ, ಜಯಶ್ರೀ ಮೋರಟಗಿ, ವೆಂಕಟೇಶ ದೇಸಾಯಿ, ಶ್ರೀಶೈಲ, ದೀಪಾ, ರುದ್ರಮ್ಮ ಟಕ್ಕಳಕಿ, ಖಾಜಿ ಸರ್‌, ಶಿವಾನಂದ ಮೇಟಿ ಸೇರಿದಂತೆ ಪ್ರೌಢ ವಿಭಾಗ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next