Advertisement

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

07:44 PM Apr 26, 2024 | Team Udayavani |

ಬೆಳಗಾವಿ: ಅಲ್ಪಸಂಖ್ಯಾತರ ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಶುಕ್ರವಾರ ಆರೋಪ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ‘ಖಂಡಿಸಬೇಕಾದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದು ವೈಯಕ್ತಿಕ ವಿಚಾರ, ಸರಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಸುಮ್ಮನಾದರು. ಎಲ್ಲ ಕಡೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಈಗ ಕ್ಷಮಾಪಣೆ ಕೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಎಲ್ಲ ಅನಾಹುತಗಳು ನಡೆದು ಕುಟುಂಬದ ಮರ್ಯಾದೆ ಹಾಳಾದ ನಂತರ ಹಿಂದೂ ಸಮಾಜಕ್ಕೆ ಅನ್ಯಾಯ ಎಂಬ ಆರೋಪಗಳು ಕೇಳಿ ಬಂದ ಮೇಲೆ ತಮ್ಮ ತಪ್ಪಿನ ಅರಿವಾಗಿ ನಂತರ ಮುಖ್ಯಮಂತ್ರಿಗಳು ಎಚ್ಚರಗೊಂಡಿದ್ದಾರೆ. ಈ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅನಾಗರಿಕತೆ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ. ಭಯ ಎಂಬುದೇ ಇಲ್ಲವಾಗಿದೆ’ ಎಂದರು.

‘ಈ ಘಟನೆ ಖಂಡಿಸಿ ಅಲ್ಪಸಂಖ್ಯಾತರು ಸಹ ಪ್ರತಿಭಟನೆ ಮಾಡುತ್ತಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಎಲ್ಲರೂ ಕೆಟ್ಟವರು ಎಂದು ನಾನು ಹೇಳುವುದಿಲ್ಲ. ಆದರೆ ಈ ರೀತಿ ಅಮಾನವೀಯವಾಗಿ ಒಬ್ಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕನ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕಾರ ಮಾಡಲಿ. ಆವಾಗ ನಿಮ್ಮ ನೀತಿ ಜನರಿಗೆ ಅರಿವಾಗುತ್ತದೆ. ಅದನ್ನು ಬಿಟ್ಟು ಪ್ರತಿಭಟನೆ ಮಾಡಿ ಸುಮ್ಮನಾದರೆ ಪ್ರಯೋಜನವಿಲ್ಲ. ನೀವು ಬಹಿಷ್ಕಾರ ಮಾಡಿದರೆ ಕುಟುಂಬದ ಸದಸ್ಯರಿಗೆ ಸಮಾಜದವರು ನಮ್ಮನ್ನು ದೂರ ಇಟ್ಟಿದ್ದಾರೆ ಎಂಬ ಒಂದು ರೀತಿಯ ಹೆದರಿಕೆ ಬರುತ್ತದೆ. ಜನರಿಗೂ ಅದರ ಅರಿವಾಗುತ್ತದೆ’ ಎಂದರು.

‘ಮಕ್ಕಳ ಮೊಟ್ಟೆ ಮಾರಿ ಕಟ್ಟಿದ ಹೋಟೆಲ್‌ ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಣದೀಪ ಸಿಂಗ್ ಸುರ್ಜೇವಾಲಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಈ ಪ್ರಕರಣ ಆಗಿದ್ದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರ ಈಗ ಅವರದೇ ಸರಕಾರ ಬಂದಿದೆ. ವಿಪಕ್ಷ ನಾಯಕರಾಗಿದ್ದಾಗ ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಈಗ ಅವರದೇ ಸರಕಾರ ಇದ್ದರೂ ತನಿಖೆ ಮಾಡಿಸುತ್ತಿಲ್ಲ ಏಕೆ’ ಎಂದು ತಿರುಗೇಟು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next