Advertisement

ಮತ್ತೆ ಬಂದಳು ಬೋಲ್ಡ್‌ ಬೆಡಗಿ ನೇಹಾ ಸಕ್ಸೇನಾ

09:56 AM Jan 31, 2020 | Lakshmi GovindaRaj |

ಕನ್ನಡದಲ್ಲಿ “ಬೈಪಾಸ್‌ ರೋಡ್‌’, “ಜಸ್ಟ್‌ ಲವ್‌’, “ಒನ್‌ ಟೈಮ್‌’, “ದಂಡು’, “ಗೇಮ್‌’ ಮೊದಲಾದ ಚಿತ್ರಗಳಲ್ಲಿ ತನ್ನ ಗ್ಲಾಮರಸ್‌ ಮತ್ತು ಬೋಲ್ಡ್‌ ಲುಕ್‌ನಲ್ಲಿ ನೋಡುಗರ ಮತ್ತು ಸಿನಿಮಂದಿಯ ಗಮನ ಸೆಳೆದಿದ್ದ ಮುಂಬೈ ಬೆಡಗಿ ನೇಹಾ ಸಕ್ಸೇನಾ ಈಗ ಮತ್ತೆ ಬಂದಿದ್ದಾರೆ. ಇತ್ತೀಚೆಗೆ ಕನ್ನಡಕ್ಕಿಂತ ಹೆಚ್ಚಾಗಿ ಮಲೆಯಾಳಂ ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿರುವ ನೇಹಾ ಸಕ್ಸೇನಾ, “ಓಜಸ್‌’ ಚಿತ್ರದ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Advertisement

ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಶುರುವಾಗಿದ್ದ “ಓಜಸ್‌’ ಚಿತ್ರ ಕೆಲ ತಾಂತ್ರಿಕ ಕಾರಣಗಳಿಂದ ತೆರೆಗೆ ಬರಲು ತಡವಾಗಿತ್ತು. ಸದ್ಯ ತನ್ನ ಬಹು ತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರ ಫೆಬ್ರವರಿ ಮೊದಲ ವಾರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ, ಇಲ್ಲಿಯವರೆಗೆ ಬೋಲ್ಡ್‌ ಮತ್ತು ಗ್ಲಾಮರಸ್‌ ಪಾತ್ರಗಳಲ್ಲೇ ಹೆಚ್ಚು ಗಮನ ಸೆಳೆದಿದ್ದ ನೇಹಾ ಸಕ್ಸೇನಾ ಈ ಚಿತ್ರದಲ್ಲಿ ಅದಕ್ಕೆ ವಿರುದ್ದವಾದ ಔಟ್‌ ಅಯಂಡ್‌ ಔಟ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡುವ ನೇಹಾ ಸಕ್ಸೇನಾ, “ಕನ್ನಡದಲ್ಲಿ ನನಗೆ ಇಲ್ಲಿಯವರೆಗೆ ಸಿಕ್ಕ ಸಿನಿಮಾಗಳು ಮತ್ತು ಅದರಲ್ಲಿ ನನ್ನ ಕ್ಯಾರೆಕ್ಟರ್‌ ಎಲ್ಲವೂ ಬೋಲ್ಡ್‌ ಆ್ಯಂಡ್‌ ಗ್ಲಾಮರಸ್‌ ಆಗಿದ್ದರಿಂದ, ಸಹಜವಾಗಿಯೇ ನಾನು ಬೋಲ್ಡ್‌ ಆ್ಯಂಡ್‌ ಗ್ಲಾಮರಸ್‌ ಆಗಿಯೇ ಕಾಣಿಸಿಕೊಳ್ಳುತ್ತಿದ್ದೆ. ಆದರೆ ಮೊದಲ ಬಾರಿಗೆ “ಓಜಸ್‌’ ಸಿನಿಮಾದಲ್ಲಿ ಡಿ-ಗ್ಲಾಮರಸ್‌ ಆದ್ರೆ, ಕ್ಲಾಸಿ ಲುಕ್‌ ಇರುವಂಥ ಕ್ಯಾರೆಕ್ಟರ್‌ ಸಿಕ್ಕಿದೆ.

ನನಗೂ ಕೂಡ ಬದಲಾವಣೆ ಬೇಕಾಗಿದ್ದರಿಂದ ಅತ್ಯಂತ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. ಅಂದಹಾಗೆ, ನೇಹಾ ಸಕ್ಸೇನಾ “ಓಜಸ್‌’ ಚಿತ್ರದಲ್ಲಿ ಬಡ ಕುಟುಂಬದಲ್ಲಿ ಅನೇಕ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ಬೆಳೆದು ಕೊನೆಗೆ ಡಿ.ಸಿ ಆಗುವ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. “ಇದೊಂದು ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ. ಬಡ ಕುಟುಂಬದ ಹುಡುಗಿಯೊಬ್ಬಳು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ.

ಕೊನೆಗೆ ಎಲ್ಲವನ್ನೂ ಮೀರಿ ನಿಂತು ಇಡೀ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದು ನನ್ನ ಪಾತ್ರ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಗಂಭೀರ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಇದೆ. ನೋಡುಗರಿಗೆ ಕೂಡ ನನ್ನ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ’ ಎನ್ನುವುದು ನೇಹಾ ಸಕ್ಸೇನಾ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next