Advertisement
ವಿವಾದವನ್ನು ಒಮ್ಮತದಿಂದ ಪರಿಹರಿಸುವ ಕುರಿತು ಸುನ್ನಿ ವಕ್ಫ್ ಮಂಡಳಿ ನ್ಯಾಯವಾದಿ ಶಾಹಿದ್ ರಿಜ್ವಿ ಗುರುವಾರವಷ್ಟೇ ಖಚಿತಪಡಿಸಿ ದ್ದರು. ರಿಜ್ವಿ ಹೇಳಿಕೆಗೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಆರು ಮುಸ್ಲಿಂ ಸಂಘಟನೆಗಳು ಆಘಾತ ವ್ಯಕ್ತಪಡಿಸಿವೆ. ಜತೆಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿವೆ. ನ್ಯಾಯವಾದಿ ಇಜಾಝ್ ಮಕೂºಲ್ ಸಂಘಟನೆಗಳ ಪರ ಶುಕ್ರವಾರ ಹೇಳಿಕೆ ನೀಡಿದ್ದು, ಸುನ್ನಿ ವಕ್ಫ್ ಮಂಡಳಿ ಜತೆಗೆ ಮಧ್ಯಸ್ಥಿಕೆ ಮಂಡಳಿ ಸದಸ್ಯ ಶ್ರೀರಾಮ ಪಂಚೂ ರಹಸ್ಯವಾಗಿ ಸಂಚು ರೂಪಿಸಿ ಹೇಳಿಕೆ ಕೊಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಿಂದೂ ಸಂಘಟನೆಗಳೂ ಸಂಧಾನಕ್ಕೆ ಒಪ್ಪಿಕೊಂಡಿಲ್ಲ ಎಂದು ಮಕ್ಬಲ್ ಪ್ರತಿಪಾದಿಸಿದ್ದಾರೆ.
ರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು ಪ್ರಕಟವಾಗುವ ನಿರೀಕ್ಷೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವ್ಯಕ್ತಪಡಿಸಿದೆ. ಭುವನೇಶ್ವರದಲ್ಲಿ ನಡೆದ 3 ದಿನಗಳ ಅಖೀಲ ಭಾರತೀಯ ಕಾರ್ಯಕಾರಿ ಮಂಡಳ ಸಭೆ ಅನಂತರ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ನಾಜಿ ಜೋಶಿ, “ಸುಪ್ರೀಂಕೋರ್ಟ್ ತೀರ್ಪು ಹಿಂದೂ ಗಳ ಪರವಾಗಿ ಬರಲಿದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. ಅಲ್ಲದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನ್ನು ಎಲ್ಲ ರಾಜ್ಯಗಳೂ ಅಳವಡಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.