ವಾಷಿಂಗ್ಟನ್: ಚೀನ ಜತೆ ವ್ಯಾಪಾರ ಒಪ್ಪಂದ ಕುರಿತು ಎರಡನೇ ಹಂತದ ಮಾತುಕತೆ ನಡೆಸಲು ತಮಗೆ ಇಷ್ಟವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ. ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, “ಕಳೆದ ಜನವರಿಯಲ್ಲಿ ಚೀನ ಜತೆ ನಾವು ಉತ್ತಮವಾದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ನಿಜ. ಆದರೆ, ಒಪ್ಪಂದದ ಬೆನ್ನಲ್ಲೇ ಚೀನ ನಮಗೆ ಮಾರಕ ಕೊರೊನಾ ಸೋಂಕಿನ ಹೊಡೆತ ನೀಡಿತು. ಹೀಗಾಗಿ, ಅದರ ಜತೆ ಮತ್ತೆ ಮಾತುಕತೆ ನಡೆಸಲು ನನಗೆ ಆಸಕ್ತಿಯಿಲ್ಲ’ ಎಂದರು.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯ ಕ್ಷೀಯ ಚುನಾವಣೆಯಲ್ಲಿ ತಾವು ಮತ್ತೂಮ್ಮೆ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿ ಸಿದ ಟ್ರಂಪ್, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡಿ ದ್ದೇನೆ. ಕಳೆದ 2 ವಾರಗಳ ಹಿಂದಷ್ಟೇ ದೇಶ ದಲ್ಲಿ ದಾಖಲೆ ಸಂಖ್ಯೆಯ, 5 ಮಿಲಿಯನ್ ಜನರಿಗೆ ಉದ್ಯೋಗ ನೀಡಲಾಗಿದೆ. ಅಮೆರಿಕಕ್ಕಾಗಿ ನಾವು ಮಾಡಿದಷ್ಟು ಕೆಲಸ ವನ್ನು ಮತ್ತೆ ಯಾರೂ ಮಾಡಿಲ್ಲ ಎಂದು ಪ್ರತಿಪಾದಿಸಿದರು.
ಇದೇ ವೇಳೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಹರಿಹಾಯ್ದ ಟ್ರಂಪ್, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಚೀನ ಪ್ರವೇಶವನ್ನು ಅವರು ಬೆಂಬಲಿಸಿದರು. ಜಾಗತಿಕ ಇತಿಹಾಸದಲ್ಲಿ ಅತಿ ದೊಡ್ಡ ಭೌಗೋಳಿಕ ಮತ್ತು ಆರ್ಥಿಕ ವಿಪತ್ತುಗಳಲ್ಲಿ ಇದು ಒಂದಾಗಿದೆ ಎಂದು ಆರೋಪಿಸಿದರು.
ಕಾಯ್ದೆಗೆ ಸಹಿ: ಹಾಂಕಾಂಗ್‌ನ ಸ್ವಾಯತ್ತತೆ ಕಾಯ್ದೆ ಹಾಗೂ ಹಾಂಕಾಂಗ್‌ಗೆ ನೀಡಲಾಗಿದ್ದ ವಿಶೇಷ ಆರ್ಥಿಕ ಸ್ಥಾನ ಮಾನ ವನ್ನು ವಾಪಸ್ ಪಡೆಯುವ ಕಾರ್ಯಕಾರಿ ಆದೇಶಗಳಿಗೆ ಟ್ರಂಪ್ ಸಹಿ ಹಾಕಿದ್ದಾರೆ. ಹಾಂಕಾಂಗ್‌ನಲ್ಲಿ ರಾಷ್ಟ್ರಿಯ ಭದ್ರತಾ ಕಾನೂನು ಜಾರಿಗೊಂಡ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ನಿರ್ಧಾರ ಹೊರಬಿದ್ದಿದೆ. ಇನ್ನು ಮುಂದೆ ಹಾಂಕಾಂಗ್‌ನ್ನು ಚೀನ ದಂತೆಯೇ ಪರಿಗಣಿಸಲಾಗು ವುದು. ಇನ್ನು ಮುಂದೆ ಹಾಂಕಾಂಗ್‌ಮೇಲೂ ಭಾರೀ ಸುಂಕ ವಿಧಿಸಲಾಗುವುದು ಎಂದರು.