Advertisement

ಉದ್ಯೋಗ ನೀಡಲು ನಿರ್ಲಕ್ಷ್ಯ

03:34 PM Mar 05, 2023 | Team Udayavani |

ಮಳವಳ್ಳಿ:  ನರೇಗಾ ಯೋಜನೆಯಡಿ ಸಮ ರ್ಪಕ ಉದ್ಯೋಗ ನೀಡದೇ ಕೂಲಿಕಾರ ರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋ ಪಿಸಿ, ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ನೆಲಮಾಕನಹಳ್ಳಿ ಗ್ರಾಪಂ ಮುಂದೆ ಜಮಾಯಿಸಿದ ಸದಸ್ಯರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಸಮರ್ಪಕ ಕೆಲಸ ನೀಡುವಂತೆ ಆಗ್ರಹಿಸಿದರು. ರಾಜ್ಯ ಘಟಕದ ಕಾರ್ಯದರ್ಶಿ ದೇವಿ ಮಾತನಾಡಿ, ಇಲ್ಲಿನ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ವರ್ಷದಲ್ಲಿ ಕೇವಲ 20 ದಿನಗಳು ಮಾತ್ರ ಕೂಲಿಕಾರರಿಗೆ ಕೆಲಸ ನೀಡಿದ್ದಾರೆ. ಕೆಲಸ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ, ಯಾವುದೇ ಕೆಲಸ ಇಲ್ಲ, ಅಲ್ಲದೇ ಆಧಾರ್‌ ಕಾರ್ಡ್‌ ಬ್ಯಾಂಕ್‌ಗೆ ಲಿಂಕ್‌ ಆಗಿಲ್ಲ ಎನ್ನುವ ನೆಲ ಹೇಳಿ ಅಲೆದಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ವರ್ಷಕ್ಕೆ 100 ದಿನಗಳ ಕೂಲಿ ನೀಡುವಂತೆ ನಿಯಮ ವಿದ್ದರೂ, ಅದನ್ನು ಪಾಲಿಸುವಲ್ಲಿ ಪಿಡಿಒ ವಿಫಲರಾಗಿದ್ದಾರೆ. ಕೂಡಲೇ ಮೇಲಾ ಧಿ ಕಾರಿಗಳು ಸ್ಥಳಕ್ಕೆ ಬಂದು ಸಮರ್ಪಕ ಕೂಲಿ ನೀಡುವಂತೆ ಸೂಚನೆ ನೀಡಬೇಕು ಹಾಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ತಾಪಂ ಇಒ ರಾಮಲಿಂಗಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಕ್ರಮ ವಹಿಸುವ ಭರವಸೆ ನೀಡಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಸುಶೀಲಾ, ಮುಖಂ ಡ ರಾದ ನಾಗರತ್ನಮ್ಮ, ಶಿವಕುಮಾರ್‌, ಮಹಾದೇವಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next