Advertisement

ನಿರ್ಲಕ್ಷಿತ ಸಮಾಜಕ್ಕೆ ಚೈತನ್ಯ ತುಂಬಿದ ಡಾ|ಬಾಬುಜಿ

02:43 PM Apr 06, 2017 | Team Udayavani |

ಹುಬ್ಬಳ್ಳಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಅಸ್ಪೃಶ್ಯರ ಸ್ಥಾನಮಾನಕ್ಕಾಗಿ ಡಾ| ಬಾಬು ಜಗಜೀವನರಾಮ ಅವರು ಕೆಳಹಂತದಿಂದಲೇ ಹೋರಾಟ ಮಾಡಿದವರಾಗಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ ಹೇಳಿದರು. 

Advertisement

ಇಲ್ಲಿನ ಮಿನಿ ವಿಧಾನಸೌಧದ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಮ ಅವರ 110ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಡಾ| ಬಾಬುಜಿ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾಜಕ್ಕೆ ಚೈತನ್ಯ ನೀಡಿದ್ದರು.

ಅವರು ಕೃಷಿ, ಕಾರ್ಮಿಕ, ರಕ್ಷಣಾ ಇಲಾಖೆ ಸೇರಿದಂತೆ ಎಲ್ಲ ಖಾತೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಖಾತೆಗಳೇ ಅವರನ್ನು ಹುಡುಕಿಕೊಂಡು ಬಂದಿದ್ದವು. ಹಸಿರು ಕ್ರಾಂತಿ ಹರಿಕಾರರಾಗಿದ್ದರು. ಅತ್ಯಂತ ನಿರ್ಲಕ್ಷéಕ್ಕೊಳಗಾದ ಸಮಾಜದವರಾಗಿದ್ದರೂ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿಯಾಗಿದ್ದರು. 

ದೇಶದ, ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕ ಕಳಕಳಿ ಹೊಂದಿದ್ದರು. ಆದರೆ ಅವರು ಹಾಕಿಕೊಟ್ಟ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ನಾವು ನಿರ್ಲಕ್ಷé ತೋರುತ್ತಿದ್ದೇವೆ ಎಂದರು. ಅತಿಥಿ ಉಪನ್ಯಾಸ ನೀಡಿದ ಕವಿವಿ ಸಂಶೋಧನಾ ವಿದ್ಯಾರ್ಥಿ ರಮೇಶ ಪವಾರ, ನಿಜವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರದ ಸವಲತ್ತು, ಸೌಲಭ್ಯಗಳು ಸಿಗಬೇಕೆಂದು ಡಾ| ಬಾಬು ಜಗಜೀವನರಾಮ ಅವರು ಪ್ರಬಲವಾಗಿ ಹೋರಾಡಿದ್ದರು. 

ಶ್ರಮಿಕರು ನಿಗದಿತ ಸಮಯ ಮಾತ್ರ ಕೆಲಸ ಮಾಡುವಂತೆ ಮಾಡಿದರು. ಸ್ವದೇಶಿ ಉತ್ಪಾದನೆಗೆ ಒತ್ತು ಕೊಟ್ಟರು. ರಕ್ಷಣಾ ಸಚಿವರಾಗಿದ್ದಾಗ ಮೂರು ದಳಗಳಿಗೆ ಆತ್ಮಸ್ಥೆçರ್ಯ ನೀಡಿ ಅವರಿಗೆ ಶಕ್ತಿ ತುಂಬಿದರು. ಅವರ ಹಸಿರು ಕಾಂತ್ರಿಯಿಂದಾಗಿಯೇ ಇಂದು ಅನ್ನಭಾಗ್ಯ ಯೋಜನೆ ಜಾರಿಯಾಗಲು ಕಾರಣ. ಅವರೊಬ್ಬ ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿಯಾಗಿದ್ದರು. ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದರು ಎಂದರು. 

Advertisement

ತಾಪಂ ಅಧ್ಯಕ್ಷೆ ಚೆನ್ನಮ್ಮ ಗೊರ್ಲ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ ಶಶಿಧರ ಮಾಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಮಚಂದ್ರ ಹೊಸಮನಿ, ಪಾಲಿಕೆ ಸದಸ್ಯ ಮೋಹನ ಹಿರೇಮನಿ, ತಾಪಂ ಉಪಾಧ್ಯಕ್ಷೆ ಸರೋಜಾ ಅಳಗವಾಡಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಕಡಪಟ್ಟಿ, ಫಕ್ಕಿರಪ್ಪ ಚಾಕಲಬ್ಬಿ, ದಾವಲಬಿ ಮಿರ್ಜಾನವರ,

ಬಸಪ್ಪ ಬೀರಣ್ಣವರ, ಪರ್ವೇಜ ಬ್ಯಾಹಟ್ಟಿ, ಗುರುಪಾದಪ್ಪ ಕಮಡೊಳ್ಳಿ, ಹಿಂದುಳಿದ ಸಮಾಜದ ಮುಖಂಡರಾದ ಶಂಕರ ಅಜಮನಿ, ಪ್ರೇಮನಾಥ ಚಿಕ್ಕತುಂಬಳ, ಮೇಘರಾಜ ಹಿರೇಮನಿ, ಗುರುನಾಥ ಉಳ್ಳಿಕಾಶಿ, ಮಾರುತಿ ದೊಡಮನಿ, ವೈ.ವೈ. ದೊಡಮನಿ ಇದ್ದರು. ಇದೇ ಸಂದರ್ಭದಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಯನ್ನು ಗಣ್ಯರು ಸನ್ಮಾನಿಸಿದರು. ಆರ್‌. ಜಯಲಕ್ಷ್ಮಿ ಸ್ವಾಗತಿಸಿದರು. ಪ್ರಲ್ಹಾದ ಗೆಜ್ಜಿ ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next