Advertisement

ವಿಪಕ್ಷಗಳದ್ದು ನಿರ್ಲಕ್ಷ್ಯ; ನಮ್ಮದು “ಸೇವಾಭಾವ”: PM ಮೋದಿ

11:34 PM Apr 14, 2023 | Team Udayavani |

ಗುವಾಹಾಟಿ: “ನಮ್ಮ ಸರಕಾರವು ಈಶಾನ್ಯ ಭಾರತವನ್ನು ಮುಖ್ಯವಾಹಿನಿಗೆ ತರಲು ಹಗಲಿರುಳು ಶ್ರಮಿಸಿದೆ. ಆದರೆ ಪ್ರಶಂಸೆ ಗಿಟ್ಟಿಸಿಕೊಳ್ಳುವ ಚಾಳಿ ಇರುವಂಥ ವಿಪಕ್ಷಗಳು ಈಶಾನ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿವೆ” ಎಂದು ಪ್ರಧಾನಿ ಮೋದಿ ಆರೋಪಿಸಿದರು.

Advertisement

ಅಸ್ಸಾಂನ ಗುವಾಹಾಟಿಯಲ್ಲಿ ಶುಕ್ರವಾರ ಈಶಾನ್ಯದ ಮೊದಲ ಏಮ್ಸ್‌ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ ದರು. “ನಾವು ದೇಶವಾಸಿಗಳೇ ಮೊದಲು ಎಂಬ ಆಧಾರದಲ್ಲಿ ನೀತಿನಿಯಮಗಳನ್ನು ರೂಪಿಸುತ್ತೇವೆ. ನಾವು ಸೇವಾಭಾವ ಮತ್ತು ಸಮರ್ಪಣೆ ಭಾವದಿಂದ ಕೆಲಸ ಮಾಡು ತ್ತೇವೆ. ವಿಪಕ್ಷಗಳು ದೇಶವನ್ನು ನಾಶ ಮಾಡುವ ಯೋಜನೆ ಹಾಕಿಕೊಂಡಿರುತ್ತವೆ’ ಎಂದೂ ಮೋದಿ ಕಿಡಿಕಾರಿದರು.

ಏಮ್ಸ್‌ ಲೋಕಾರ್ಪಣೆ ಬಳಿಕ ಅವರು ನಲ್‌ಬಾರಿ, ನಗಾಂವ್‌ ಮತ್ತು ಕೋಕ್ರಜಾರ್‌ನಲ್ಲಿ 3 ವೈದ್ಯಕೀಯ ಕಾಲೇಜುಗಳನ್ನೂ ಉದ್ಘಾ ಟಿಸಿದರು. ಮೂರೂ ಕಾಲೇಜುಗಳು ಆರಂಭ ದಲ್ಲಿ ತಲಾ 500 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಿದ್ದು, ಅಸ್ಸಾಂನಲ್ಲಿ ಒಟ್ಟು 1,500 ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಪ್ರವೇಶ ಪಡೆಯಲಿದ್ದಾರೆ ಎಂದೂ ಹೇಳಿದರು.

ಬಿಹು ನೃತ್ಯ ದಾಖಲೆ
ಏಕಕಾಲಕ್ಕೆ ಒಂದೇ ಪ್ರದೇಶದಲ್ಲಿ ಬರೋಬ್ಬರಿ 11,304 ಮಂದಿ ಡೋಲು ಬಾರಿಸುತ್ತಾ, ಬಿಹು ನೃತ್ಯ ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಬರೆದಿದ್ದಾರೆ. ಅಸ್ಸಾಂನ ಗುವಾಹಾಟಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರೂ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next