Advertisement
ಆದರೆ, ತಾಲೂಕು ಆಡಳಿತ ಮಾತ್ರಯಾವುದೇ ಕಠಿಣ ನಿಲುವು ತಗೆದುಕೊಳ್ಳದೆನಿರ್ಲಕ್ಷವಹಿಸಿದ್ದು, ಮಧುಗಿರಿ ಲಾಕ್‌ಡೌನ್ ನತ್ತಜಾರುತ್ತಿದೆ.ರಾಜ್ಯದಲ್ಲಿ ಕೊರೊನಾ 2ನೇ ಅಲೆಯಿದ್ದು,ರೂಪಾಂತರಿ ತಳಿಯ ಅನುಷ್ಠಾನವಾಗಿದೆ. ಆದರೆ,ಸರ್ಕಾರ ಉಪ ಚುನಾವಣೆಯತ್ತ ಗಮನಹರಿಸುತ್ತಿದ್ದು, ಜನರ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ.
Related Articles
Advertisement
ಸೋಂಕಿತರಿಗೆ ಹಾಸ್ಟೆಲ್ ವ್ಯವಸ್ಥೆ: ಈ ಕುರಿತುಉದಯವಾಣಿಯೊಂದಿಗೆ ಮಾತನಾಡಿದ ನೂತನತಹಶೀಲ್ದಾರ್ ವೈ.ವಿ.ರವಿ, ಈಗಾಗಲೇ ಕೊರೊನಾವಿಚಾರದಲ್ಲಿ ಸಭೆ ನಡೆಸಿದ್ದೇನೆ. ಆರೋಗ್ಯ, ಪುರಸಭೆ,ಪೊಲೀಸ್ ಇಲಾಖೆಗಳ ಸಹಕಾರದಲ್ಲಿ ಕಳೆದ ಬಾರಿನಡೆಸಲಾದ ಕ್ರಮಗಳ ಬಗ್ಗೆ ಚರ್ಚಿಸಿದ್ದು, ಸೂಕ್ಷ್ಮಪ್ರದೇಶಗಳನ್ನು ಕಂಟೋನ್ಮೆಂಟ್ ಝೋನ್‌ಗಳಾಗಿಪರಿಗಣಿಸುತ್ತೇವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು,ಉಳಿದ ವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರಿಗಾಗಿಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದ್ದು, ಸೊಂಕಿತರುಹೆಚ್ಚಾದರೆ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ: ಕಳೆದ ಬಾರಿಎಸಿ ನಂದಿನಿದೇವಿ, ತಹಶೀಲ್ದಾರ್ ಆಗಿದ್ದಡಾ.ಜಿ.ವಿಶ್ವನಾಥ್ ಹಾಗೂ ಸಿಪಿಐ ಸರ್ದಾರ್,ಪಿಎಸ್‌ಐ ಕಾಂತರಾಜ್, ಪುರಸಭೆ ಮುಖ್ಯಾಧಿ ಕಾರಿಅಮರನಾರಾಯಣ್, ಈಗಿನ ಟಿಎಚ್‌ಒ ಡಾ.ರಮೇಶ್‌ಬಾಬು ಹಾಗೂ ಹಲವು ಕೊರೊನಾವಾರಿಯರ್ಸ್‌ಗಳ ಪರಿಶ್ರಮದಿಂದ ಮಧುಗಿರಿಯಲ್ಲಿಕೊರೊನಾ ಅಷ್ಟಾಗಿ ತನ್ನ ಭಯಂಕರ ರೂಪವನ್ನುತೋರಲು ಆಗಿರಲಿಲ್ಲ. ಆದರೆ, ಇಂದು ನೂತನ ಎಸಿಆಗಿರುವ ಸೋಮಪ್ಪ ಕಡಕೋಳ, ತಹಶೀ ಲ್ದಾರ್‌ಆಗಿ ವೈ.ವಿ.ರವಿ ಅಧಿಕಾರದಲ್ಲಿದ್ದು, ಕೊರೊನಾನಿಯಮ ಎಷ್ಟು ಗಂಭೀರವಾಗಿ ಪಾಲಿಸುತ್ತಾರೋನೋಡಬೇಕಿದೆ.
ಮಧುಗಿರಿ ಸತೀಶ್