Advertisement

ಐತಿಹಾಸಿಕ ಸ್ಮಾರಕ ರಕ್ಷಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

04:24 PM Apr 15, 2022 | Team Udayavani |

ಹಾರನಹಳ್ಳಿ: ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಹೊಯ್ಸಳರ ಕಾಲದ ಶ್ರೀ ಸೋಮೇಶ್ವರ ದೇವಸ್ಥಾನದ ಶಿಥಿಲಾವಸ್ಥೆಯಲ್ಲಿದೆ. ದೇವಸ್ಥಾನವು ಮಳೆಗಾಲದಲ್ಲಿ ಸೋರುತ್ತಿದೆ.

Advertisement

ದೇವಸ್ಥಾನದ ಆವರಣದಲ್ಲಿ ಗಿಡಗಂಟಿಗಳು ಬೆಳೆದಿವೆ. ಒಣಗಿರುವ ಗಿಡಗಂಟಿಗಳಿಗೆ ಕಿಡಿಗೇ ಡಿಗಳು ಬೆಂಕಿ ಹಚ್ಚಿರುವುದರಿಂದ ಸೋಮೇಶ್ವರ ದೇಗುಲದ ಆವರಣ ಸ್ಮಶಾನದ ರೂಪ ಪಡೆದಿ ರುವುದು ಭಕ್ತರಿಗೆ ಬೇಸರ ಉಂಟು ಮಾಡಿದೆ. ಗಿಡಗಂಟಿಗಳು ಹೊತ್ತಿ ಉರಿಯುತ್ತಿದ್ದಾಗ ಗ್ರಾಮಸ್ಥರು ಬೆಂಕಿ ಆರಿಸಿದ್ದರಿಂದ ದೇಗುಲ ದೇವ ಕೋಷ್ಠದ ವಿಗ್ರಹಗಳಿಗೆ ಅದೃಷ್ಟಾವಶಾತ್‌ ಹಾನಿಯಾಗಿಲ್ಲ.

ದೇಗುಲದ ಗೋಪುರದಲ್ಲಿ ದೇವಸ್ಥಾನದ ಗೋಪುರದ ಮೇಲೆ ಅರಳಿ ವೃಕ್ಷ, ಕುರುಚಲು ಗಿಡ ಬೆಳೆದು ನಿಂತಿವೆ. ಅದಕ್ಕೆ ಬೆಂಕಿ ಬಿದ್ದಿದ್ದರೆ ದೇವಸ್ಥಾನದ ಗೋಪುರದ ವಿಗ್ರಹಗಳು ಕರಕಲಾ ಗುತ್ತಿದವು. ಸದ್ಯಕ್ಕೆ ಅನಾಹುತ ತಪ್ಪಿರುವುದು ಸಮಾಧಾನಕರ ಸಂಗತಿ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ಸೋಮೇಶ್ವರ ಶಿವಲಿಂಗ ಕಳ್ಳತನವಾಗಿತ್ತು. ಹೊಸ ಶಿವಲಿಂಗ ಪ್ರತಿಷ್ಠಾಪನೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಧಾರ್ಮಿಕ ದತ್ತಿ ಇಲಾಖೆ ಆಗಮ ಪಂಡಿತರು ದೇವಾಲಯಕ್ಕೆ ಭೇಟಿ ನೀಡಿ ಹೊಸ ಶಿವಲಿಂಗ ಪ್ರತಿಷ್ಠಾಪನೆ ವರದಿ ನೀಡಿದ್ದರು. ಇಲಾಖೆ ಅಧಿಕಾರಿಗಳು ಹಣ ನೀಡಲು ಕಷ್ಟವಾಗುತ್ತದೆ ಎಂದು ಹಿಂಬರಹ ನೀಡಿದ್ದಾರೆ. ರಾಜ್ಯ ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಗಳಿಗೆ ಅನೇಕ ಬಾರಿ ಶ್ರೀ ಸೋಮೇಶ್ವರ ದೇವಸ್ಥಾನದ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರೂ ಗಮನ ನೀಡಿಲ್ಲ. ಈಗಲಾದರೂ ಜಿಲ್ಲಾಡಳಿತ ಗಮನ ಹರಿಸಬೇಕೆಂದು ಹಾರನಹಳ್ಳಿ ಗ್ರಾಮಸ್ಥರು ಒತ್ತಾಯಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next