Advertisement
ಜನರೇಟರ್‌ಗೆ ಸಿಡಿಲುಸುಮಾರು ಕಳೆದೆರಡು ತಿಂಗಳಿನ ಹಿಂದೆ ಅಂಡಿಂಜೆ ದೂರವಾಣಿ ವಿನಿಯಮ ಕೇಂದ್ರದ ಬಳಿಯಿರುವ ಬಿಎಸ್ ಎನ್‌ಎಲ್ ಟವರ್‌ನ ಜನರೇಟರ್‌ಗೆ ಸಿಡಿಲು ಬಡಿದು ಭಾಗಶಃ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ವಿದ್ಯುತ್ ಪ್ರಸರಣ ಇದ್ದಾಗ ಮಾತ್ರ ಟವರ್ ಕಾರ್ಯಾಚರಿಸುತ್ತಿದ್ದು, ಮೊಬೈಲ್‌ಗೆ ನೆಟ್‌ವರ್ಕ್ ಸಿಗುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸ್ತಬ್ಧಗೊಳ್ಳುತ್ತದೆ. ಆದರೆ ಇನ್‌ವರ್ಟರ್ ಸಹಾಯದಿಂದ ಸ್ಥಿರ ದೂರವಾಣಿಗಳು ಕೆಲಹೊತ್ತು ಚಾಲನೆಯಲ್ಲಿದ್ದು, ಮತ್ತೆ ಸ್ತಬ್ಧಗೊಳ್ಳುತ್ತವೆ. ಕೆಲವೊಮ್ಮೆ ದಿನವಿಡೀ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದಾಗ ಈ ಭಾಗದ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ!
ಮೊಬೈಲ್, ಸ್ಥಿರ ದೂರವಾಣಿಳು ಸ್ತಬ್ಧಗೊಳ್ಳುತ್ತಿರುವುದರಿಂದ ಗ್ರಾಹಕರು ಮಾತ್ರವಲ್ಲದೆ ವ್ಯಾಪ್ತಿಯಲ್ಲಿರುವ ಪಂ., ಇತರ ಇಲಾಖೆಗಳಿಗೂ ಸಮಸ್ಯೆ ಉಂಟಾಗಿದೆ. ಖಾಸಗಿ ಕಂಪೆನಿಗಳು ತಮ್ಮ ಸೇವೆ ಯನ್ನು ನಿರಂತರವಾಗಿ ನೀಡುತ್ತಿರುವಾಗ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಇದು ಸಾಧ್ಯವಿಲ್ಲವೇ ಎಂಬುದು ಜನರ ಪ್ರಶ್ನೆ. ಈ ಬಗ್ಗೆ ಅಂಡಿಂಜೆ ವಿನಿಯಮ ಕೇಂದ್ರದ ಸಿಬಂದಿಯನ್ನು ಕೇಳಿದರೆ, ಟವರ್‌ನ ಜನರೇಟರ್‌ನ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗುತ್ತದೆ. ಆ ಪ್ರಕ್ರಿಯೆ ಈಗ ನಡೆಯುತ್ತಿದ್ದುದರಿಂದ ಇಲ್ಲಿನ ಜನರೇಟರ್ ದುರಸ್ತಿಗೆ ವಿಳಂಬವಾಗಿದೆ. ಇನ್ನು ಕೆಳವೇ ದಿನಗಳಲ್ಲಿ ಜನರೇಟರ್‌ನ ದುರಸ್ತಿ ಅಥವಾ ಹೊಸ ಜನರೇಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Related Articles
ಸಿಡಿಲಿನಿಂದ ಜನರೇಟರ್‌ಗೆ ಹಾನಿಯಾಗಿದ್ದು, ತ್ವರಿತವಾಗಿ ಕೊಟೇಶನನ್ನು ಮಂಗಳೂರು ಪ್ಲ್ರಾನಿಂಗ್ ಸೆಕ್ಷನ್‌ಗೆ ಕಳುಹಿಸಿಕೊಡಲಾಗಿದೆ. ಟೆಂಡರ್ ಪ್ರಕ್ರಿಯೆ ವ್ಯತ್ಯಯ ದಿಂದಾಗಿ ಜನರೇಟರ್ ದುರಸ್ತಿಗೆ ವಿಳಂಬವಾಗಿದೆ. ಸಮಸ್ಯೆ ಅರಿವಾಗಿದ್ದು, ತ್ವರಿತ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತೇವೆ.
– ಸುಂದರ
ಬಿಎಸ್‌ಎನ್‌ಎಲ್ ಉಪ ವಿಭಾಗೀಯ
ಅಭಿಯಂತರು (ಸಮೂಹ), ಬೆಳ್ತಂಗಡಿ
Advertisement
ಸಮಸ್ಯೆ ಆಗಿದೆಮೊದಲು ಮನೆಯೊಳಗೆ ಸಿಗುತ್ತಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಈಗ ಮನೆಯ ಹೊರಗೆ ಬಂದರೂ ಸಿಗುತ್ತಿಲ್ಲ. ನಮಗೆ ಕರೆಯೇ ಕಷ್ಟ, ಅಂತರ್ಜಾಲ ಸೇವೆ ಮರೀಚಿಕೆ ಆಗಿದೆ. ಅಧಿ ಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ನಾನೋರ್ವ ಶಿಕ್ಷಕನಾಗಿದ್ದು, ಇಂದಿನ ತಂತ್ರಜ್ಞಾನ ಆಧರಿತ ಪಾಠಗಳಿಗೆ ಪರಸ್ಪರ ಮಾಹಿತಿ ವಿನಿಯಮಕ್ಕೆ, ಹೊಸ ಚಿಂತನೆಗೆ, ಅಂತರ್ಜಾಲ ಆಧರಿತ ವ್ಯವಹಾರಗಳಿಗೆ ಇದನ್ನೇ ಅವಲಂಬಿಸಿದ್ದೇವೆ. ಆದರೆ ಕಳಪೆ ಸೇವೆಯಿಂದ ಸಮಸ್ಯೆ ಉಂಟಾಗಿದೆ.
-ಜಯರಾಮ ಮಯ್ಯ
ಕೊಕ್ರಾಡಿ, ಬಿಎಸ್‌ಎನ್‌ಎಲ್ ಗ್ರಾಹಕರು ಪದ್ಮನಾಭ ವೇಣೂರು