Advertisement

ಚಾಲಕನ ವರದಿ ನೆಗೆಟಿವ್‌ ನಿಟ್ಟುಸಿರು ಬಿಟ್ಟ ಕೋಟೆಕಲ್‌

08:41 AM May 21, 2020 | Suhan S |

ಗುಳೇದಗುಡ್ಡ: ಎಂಟು ದಿನಗಳ ಹಿಂದೆ ಸಮೀಪದ ಕೋಟೆಕಲ್‌ ಗ್ರಾಮಕ್ಕೆ ಭೇಟಿ ನೀಡಿದ್ದ ಬೀಳಗಿ ಖಾಸಗಿ ವಾಹನ ಚಾಲಕರೊಬ್ಬರ ಗಂಟಲುದ್ರವ ಪರೀಕ್ಷೆಗೆ ಕಳುಹಿಸಿದ್ದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಬುಧವಾರ ವರದಿ ನೆಗೆ‌ಟಿವ್‌ ಬಂದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಕೋಟೆಕಲ್‌ ಗ್ರಾಮದಲ್ಲಿ ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರನ್ನು ಬೀಳಗಿ ತಾಲೂಕಿನ ಹೆರಕಲ್‌ ಗ್ರಾಮಕ್ಕೆ ಕರೆದುಕೊಂಡು ಹೋಗಲು ಎಂಟು ದಿನಗಳ ಹಿಂದೆ ಆ ಚಾಲಕ ಗ್ರಾಮಕ್ಕೆ ಬಂದಿದ್ದ. ಚಾಲಕ ಗ್ರಾಮದಲ್ಲಿ ಕೇವಲ 5-10 ನಿಮಿಷ ಇದ್ದು, ಆಮೇಲೆ ಪುನಃ ತೆರಳಿದ್ದರು. ಮಂಗಳವಾರ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿ ಬುಧವಾರ ನೆಗಟಿವ್‌ ಬಂದಿದ್ದು, ಗ್ರಾಮಸ್ಥರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೋಟೆಕಲ್‌ ಗ್ರಾಮ ಪಂಚಾಯಿತಿ ಪಿಡಿಒ ಎಲ್‌.ಜಿ. ಶಾಂತಗೇರಿ ತಿಳಿಸಿದ್ದಾರೆ.

ಸೀಲ್ಡೌನ್: ಚಾಲಕನ ಟ್ರ್ಯಾಕಿಂಗ್‌ ಹಿಸ್ಟರಿ ಕೇಳಿದಾಗ ಕೋಟೆಕಲ್‌ ಗ್ರಾಮಕ್ಕೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅವನು ಹೋಗಿ ಬಂದಿದ್ದ ಮನೆಯಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದು, ಇನ್ನೂ 2-3ದಿನ ಸೀಲ್‌ಡೌನ್‌ ಮಾಡಲಾಗುವುದು. ಸದ್ಯ ಮನೆಯವರಿಗೆ ಹೋಮ್‌ ಕ್ವಾರೆಂಟೈನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆತಂಕ: ಬೀಳಗಿ ಚಾಲಕನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದರಿಂದ ಕೋಟೆಕಲ್‌ ಗ್ರಾಮದ ಜನರಲ್ಲಿ ಆತಂಕ ಮೂಡಿತ್ತು. ಹೆಲ್ತ್‌ ಬುಲಿಟಿನ್‌ ಬರುವವರೆಗೂ ಜನರು ಆತಂಕದಲ್ಲಿದ್ದರೂ, ಹೆಲ್ತ್‌ ಬುಲಿಟಿನ್‌ನಲ್ಲಿ ನೆಗೆಟಿವ್‌ ಬಂದಿದ್ದರಿಂದ ಜನರು ನಿಟ್ಟುಸಿರುಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next