Advertisement

ಕೊಂಗಂಡಿ ಬಾಲಕಿ ಸಾವು: ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿಲ್ಲ ಎಂದು ವರದಿ

09:15 AM Apr 10, 2020 | keerthan |

ಯಾದಗಿರಿ:  ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿ ಕೋವಿಡ್-19 ಪರೀಕ್ಷೆಯ ವರದಿ ನೆಗೆಟಿವ್  ಬಂದಿದ್ದು, ಜನರ ಆತಂಕ ನಿವಾರಣೆಯಾಗಿದೆ.

Advertisement

ಬೆಂಗಳೂರಿನಿಂದ ಕಳೆದ ಎಪ್ರಿಲ್ 1 ರಂದು ಕುಟುಂಬ ಸಮೇತ ಶಹಾಪುರ ತಾಲೂಕಿ ಕೊಂಗಂಡಿಗೆ ಹಿಂತಿರುಗಿದ್ದರು, ಬಾಲಕಿಯಲ್ಲಿ ತೀವ್ರ ಜ್ವರ ಕೆಮ್ಮಿನಿಂದ ಬಳಲಿ ಸಾವನ್ನಪ್ಪಿರುವ ಘಟನೆ ಎಪ್ರಿಲ್ ಏಳರಂದು ನಡೆದಿತ್ತು.

ಬಾಲಕಿಗೆ ಕೋವಿಡ್-19 ಸೋಂಕು ಕುರಿತು ತತನಿಖೆ ನಡೆಸಲಾಗಿತ್ತು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳಂತೆ ಬಾಲಕಿಯ ಅಂತ್ಯಕ್ರಿಯೆ ಮಾಡಲಾಗಿತ್ತು.

ಇದೀಗ ಕೋವಿಡ್-19 ನೆಗೆಟಿವ್ ಎಂದು ವರದಿ ಬಂದಿರುವುದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next