Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.10ರಿಂದ ಸಾಲು ಸಾಲು ರಜೆಗಳು ಇರುವುದರಿಂದ, ಪ್ರವಾಸಿಗರು ಹಾಗೂ ಬೇರೆ ಊರುಗಳಿಂದ ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಕೋವಿಡ್ ಹರಡುವ ಸಾಧ್ಯತೆ ಇದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಏ.10 ರಿಂದ 20ರವರೆಗೆ ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಪ್ರವಾಸಿ ಸ್ಥಳಗಳು, ರೆಸಾರ್ಟ್‌ಗಳು, ಕನ್ವೆಷನ್‌ಹಾಲ್, ಪಾರ್ಟಿ ಹಾಲ್, ರೀಕ್ರೇಷನ್ ಕ್ಲಬ್ ಮತ್ತು ಚಿತ್ರಮಂದಿರಗಳಿಗೆ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದರು.
Related Articles
Advertisement
ನಿಯಮ ಉಲ್ಲಂ ಸಿದರೆ ಕ್ರಮ:
ನಿಯಮ ಉಲ್ಲಂ ಸಿದಲ್ಲಿ ಸ್ಥಳಗಳ ಮಾಲಿಕರೇ ಜವಾಬ್ದಾರರಾಗಿರುತ್ತಾರೆ. ಹಾಗೂ ಉಲ್ಲಂ ಸಿದ ಪ್ರಕರಣಗಳಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಆ ಸ್ಥಳವನ್ನು ಮುಚ್ಚಲಾಗುವುದು. ಜೊತೆಗೆ ಯಾವುದೇ ವ್ಯಕ್ತಿಗಳು ಉಲ್ಲಂ ಸಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಶೇ.3.1 ರಷ್ಟಿದೆ. 240 ಸೋಂಕಿನ ಪ್ರಕರಣ ಬಂದರೇ ಅದರಲ್ಲಿ 200 ಪ್ರಕರಣವು ನಗರಕ್ಕೆ ಸೇರಿದ್ದೆ. ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಷ್ಟಾಗಿಲ್ಲ. ಹೀಗಾಗಿ, ಕೊರೋನಾ ವೈರಸ್ ಅನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಹೈ ಅಲರ್ಟ್:
ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ. ಮೈಸೂರಿನಲ್ಲಿ ಕಳೆದ ವರ್ಷ ಜನರೇ ಬಹಳ ಜಾಗೃತರಾಗಿದ್ದರು. ಆಗ ಸಾರ್ವಜನಿಕರು ಕೊರೊನಾ ನಿಯಮ ಪಾಲಿಸುತ್ತಿದ್ದರು. ಈಗ ರಿಲ್ಯಾಕ್ಸ್ ಆಗುವುದು ಬೇಡ ಎಂದು ಮನವಿ ಮಾಡಿದರು. ಹಳ್ಳಿಗಳಲ್ಲಿ ಜಾತ್ರೆ, ಹಬ್ಬ, ಸಮಾರಂಭ ಕಾರ್ಯಕ್ರಮಗಳಿಗೆ ನಿರ್ಬಂಧವಿದ್ದು, ಅನುಮತಿ ಇಲ್ಲದೇ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮದುವೆ, ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದೆ. ನಿಯಮ ಉಲ್ಲಂ ಸಿದ್ದಲ್ಲಿ ಅನುಮತಿ ಪಡೆದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಹೀಗಾಗಿ, ಪ್ರತಿ ಠಾಣಾ ಮಟ್ಟದಲ್ಲಿ ಇವುಗಳನ್ನು ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಆದೇಶ: ಸ್ಥಳೀಯ ಜಿಲ್ಲಾಡಳಿತ ಕೊರೊನಾ ಸಂಬಂಧ ಯಾವುದೇ ನಿರ್ಬಂಧಗಳನ್ನು ಪ್ರಕಟಿಸುವಂತಿಲ್ಲ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.