Advertisement

ತಮಿಳುನಾಡಿನಿಂದ ಬರುವವರೆಗೂ ನೆಗೆಟಿವ್‌ ವರದಿ ಕಡ್ಡಾಯ

04:55 PM Aug 25, 2021 | Team Udayavani |

ಚಾಮರಾಜನಗರ: ತಮಿಳುನಾಡು ರಾಜ್ಯ ಸಂಪರ್ಕಿಸುವ ತಾಲೂಕಿನ ಗಡಿ ಭಾಗದ ಪುಣಜನೂರು ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮಂಗಳವಾರ ಭೇಟಿ ನೀಡಿ ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು.

Advertisement

ಚೆಕ್‌ ಪೋಸ್ಟ್‌ನಲ್ಲಿ ನಿರ್ವಹಿಸಲಾಗುತ್ತಿರುವ ತಪಾಸಣಾ ಕಾರ್ಯವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಪ್ರತಿದಿನ ಎಷ್ಟು ವಾಹನಗಳು ಸಂಚರಿಸಿವೆ? ಸರಕು ಸಾಗಣೆ, ಅಗತ್ಯ ಸೇವೆಯ ವಾಹನಗಳು, ಇತರೆ ಖಾಸಗಿ ವಾಹನಗಳು ಎಷ್ಟು ಸಂಖ್ಯೆಯಲ್ಲಿ ಚೆಕ್‌ ಪೋಸ್ಟ್‌ ಮೂಲಕ ಹಾದು ಹೋಗಿವೆ ಎಂಬ ಬಗ್ಗೆ ಪರಿಶೀಲಿಸಿದರು.

ನಿತ್ಯ ಎಷ್ಟು ಜನ ಪ್ರಯಾಣಿಸುತ್ತಿದ್ದಾರೆ ಎಂಬ ಬಗ್ಗೆಯೂ ವಿವರ ಪಡೆದ ಜಿಲ್ಲಾಧಿಕಾರಿಯವರು ಚೆಕ್‌ಪೋಸ್ಟ್‌ ಮುಖೇನ ಸಂಚರಿಸಿರುವ ವಾಹನಗಳ ವಿವರವನ್ನು ನಮೂದು ಮಾಡಿರುವ ಪುಸ್ತಕವನ್ನು ಪರಿಶೀಲಿಸಿದರು. ತಮಿಳುನಾಡಿನಿಂದ ಜಿಲ್ಲೆಗೆ ಪ್ರವೇಶಿಸುವರರು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದಿದ್ದರೂ ಕೂಡ 72 ಗಂಟೆಯೊಳಗೆ ಮಾಡಿಸಿದ ಆರ್‌ ಟಿಪಿಸಿಆರ್‌ ಪರೀಕ್ಷೆ ನೆಗೆಟಿವ್‌ ವರದಿ
ಕಡ್ಡಾಯವಾಗಿಹಾಜರುಪಡಿಸಲೇಬೇಕು.

ಇದನ್ನೂ ಓದಿ:ನಟಿ ಸಂಜನಾ ಗಲ್ರಾನಿಗೆ ಅನಾರೋಗ್ಯ| ಆಸ್ಪತ್ರೆಗೆ ದಾಖಲು

ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ, ಲಸಿಕೆ ಪಡೆದಿರುವ ಬಗ್ಗೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ದಾಖಲೆಗಳು ನೈಜವಾಗಿವೆಯೇ ಎಂದು
ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚೆಕ್‌ಪೋಸ್ಟ್‌ ಅಧಿಕಾರಿ ಸಿಬ್ಬಂದಿಗೆ ಸೂಚಿಸಿದರು.

Advertisement

ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಇತರೆ ಅಧಿಕಾರಿಗಳು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next