Advertisement

ಭಜನೆಯಿಂದ ಋಣಾತ್ಮಕ ಅಂಶ ದೂರ: ಆಸ್ರಣ್ಣ

10:40 PM Jul 13, 2019 | mahesh |

ಪುತ್ತೂರು: ಕಾಟುಕುಕ್ಕೆ ಭಜನ ಚಾರಿಟೆಬಲ್‌ ಟ್ರಸ್ಟ್‌ ಸಮಾಜಮುಖಿಯಾಗಿ ಎಲ್ಲರನ್ನೂ ಸೇರಿಸಿಕೊಳ್ಳುವ ಮೂಲಕ ದೇವರನ್ನು ಕಾಣುವ ಪ್ರಯತ್ನ ದತ್ತ ಸಾಗುತ್ತಿದೆ. ಭಜನೆಯ ಪ್ರೇರಣೆ ಸಂಘಟನಾತ್ಮಕವಾಗಿ ಬೆಳೆದಂತೆ ಸಮಾಜದ ಋಣಾತ್ಮಕ ಅಂಶಗಳು ದೂರವಾಗಲಿವೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.

Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಶನಿವಾರ ಕಾಟುಕುಕ್ಕೆ ಭಜನ ಚಾರಿಟೆಬಲ್‌ ಟ್ರಸ್ಟ್‌ನ್ನು ಉದ್ಘಾಟಿಸಿದರು. ಕಾಟು ಎಂದರೆ ಮೂಲ ಎಂದರ್ಥ. ಮಹಿಳೆಯರೇ ದೊಡ್ಡ ಭೂಮಿಕೆಯಲ್ಲಿದ್ದುಕೊಂಡು ಪ್ರಥಮ ಬಾರಿಗೆ ಭಜನ ಟ್ರಸ್ಟ್‌ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ನಮ್ಮ ಸಂಸ್ಕೃತಿಯ ಭಾಗವಾದ ಭಜನೆ ಸಂಕೀರ್ತನೆಯನ್ನು ಮತ್ತೂಮ್ಮೆ ಬೆಳೆಸುವ ನಿಟ್ಟಿನಲ್ಲಿ ಕಾಟುಕುಕ್ಕೆ ಭಜನ ಟ್ರಸ್ಟ್‌ ಮುಂದಡಿ ಇಡುತ್ತಿರುವುದು ಧಾರ್ಮಿಕ ಕ್ರಾಂತಿಯೇ ಸರಿ. ಕುಟುಂಬದ ಜತೆ ಭಜನೆ ಹಾಡುವುದರಿಂದ ಮಕ್ಕಳಲ್ಲಿ ಸಾಹಿತ್ಯ ಬೆಳೆಯುತ್ತದೆ. ಜ್ಞಾನವೃದ್ಧಿ ಆಗುತ್ತದೆ. ಜತೆಗೆ ಸಂಸ್ಕಾರವೂ ಬೆಳೆ ಯುತ್ತದೆ. ಈ ನಿಟ್ಟಿನಲ್ಲಿ 100 ಭಜನ ತಂಡಗಳನ್ನು ಕಟ್ಟಿ ಬೆಳೆಸಿರುವುದು ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಯಂದಿರು ಪ್ರೇರಣೆ ನೀಡಲಿ
ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಶಾಂತಿ, ನೆಮ್ಮದಿ, ಶಿಸ್ತನ್ನು ಬೆಳೆಸುವಲ್ಲಿ ಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ತಾಯಂದಿರು ಮಕ್ಕಳಿಗೆ ಭಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು. ಹನುಮಗಿರಿ ಕೋದಂಡರಾಮ ದೇವ ಸ್ಥಾನದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಾರಂಪಾಡಿ ಉಮಾ ಮಹೇಶ್ವರ ದೇವಸ್ಥಾನದ ಉಪಾಧ್ಯಕ್ಷ ಮಧುಕರ ರೈ, ಮುಂಬಯಿಯ ಉದ್ಯಮಿ ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಶುಭಹಾರೈಸಿದರು.

Advertisement

ಭಜನ ಪುಸ್ತಕ ಬಿಡುಗಡೆ
ಭಜನಾಮೃತ ಭಾಗ -1, ಭಾಗ -2 ಮತ್ತು ವಿಜಯದಾಸರ ಪಂಚರತ್ನ ಸುಳಾದಿ ಎಂಬ ಎರಡು ಭಜನ ಸಾಹಿತ್ಯ ಪುಸ್ತಕ ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇ.ಧ. ಭಜನಾ ಪರಿಷತ್‌ ಕಾರ್ಯದರ್ಶಿ ಹಾಗೂ ಕಾಟುಕುಕ್ಕೆ ಭಜನ ಟ್ರಸ್ಟ್‌ ಉಪಾಧ್ಯಕ್ಷ ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿ, ಪತ್ರಕರ್ತ ಎಂ.ನಾ. ಚಂಬಲ್ತಿಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ದ.ಕ. ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯ 100 ಭಜನಾ ತಂಡಗಳ ಸದಸ್ಯರು ಪಾಲ್ಗೊಂಡರು. ಬೆಳಗ್ಗೆ ಕಿಶೋರ್‌ ಪೆರ್ಲ ಮತ್ತು ಸಂಗಡಿಗರಿಂದ ದಾಸ ಭಕ್ತಿ ಭಜನಾಮೃತ, ಭಜನಾರ್ಥಿಗಳಿಂದ ಸಮೂಹ ಗಾಯನ ನಡೆಯಿತು.

ಭಜನೆಯ ಅಭ್ಯುದಯಕ್ಕಾಗಿ
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಕಾಟುಕುಕ್ಕೆ, ಭಕ್ತ ಹಾಗೂ ಭಗವಂತನನ್ನು ಭಕ್ತಿಯ ವೇದಿಕೆ ಮೂಲಕ ಸೇರಿಸುವ ಮಾಧ್ಯಮ ಭಜನೆ. ನಮ್ಮಲ್ಲಿ ಸಾಂಪ್ರದಾ ಯಿಕವಾಗಿ ಬಂದ ಭಜನೆಯನ್ನು ಸಂಸ್ಕಾರಯುತವಾಗಿ ಬೆಳೆಸುವ ಚಿಂತನೆ ಟ್ರಸ್ಟ್‌ನಲ್ಲಿದೆ. 2009ರಲ್ಲಿ ಕಾಟುಕುಕ್ಕೆಯಲ್ಲಿ 1 ತಂಡದಿಂದ ಆರಂಭವಾದ ಭಜನ ತರಬೇತಿಯಲ್ಲಿ ಈಗ 100 ತಂಡಗಳು ತರಬೇತಿ ಪಡೆದಿವೆ. ಎಲ್ಲರನ್ನೂ ಸೇರಿಸಿಕೊಂಡು ಭಜನೆಯ ಅಭ್ಯುದಯಕ್ಕೆ ಟ್ರಸ್ಟ್‌ ಕೆಲಸ ಮಾಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next