Advertisement

ನೀತು ಮರೀಚಿಕೆ

11:40 AM Jul 30, 2018 | |

ಕಿರುಚಿತ್ರ ತಯಾರಾಗುತ್ತದೆ ಎಂದರೆ ಅಲ್ಲೊಂದಿಷ್ಟು ಹೊಸಬರ ತಂಡ ಸೇರಿರುತ್ತದೆ ಎಂದೇ ಅರ್ಥ. ನಟ-ನಟಿಯರಿಂದ ಹಿಡಿದು ಬಹುತೇಕ ಎಲ್ಲರೂ ಹೊಸಬರಾಗಿರುತ್ತಾರೆ. ಆದರೆ, “ಮರೀಚಿಕೆ’ ಎಂಬ ಕಿರುಚಿತ್ರ ತಂಡ ಮಾತ್ರ ಚಿತ್ರರಂಗದಲ್ಲಿ ಬಿಝಿಯಾಗಿರುವ, ಹಲವು ಸಿನಿಮಾಗಳಲ್ಲಿ ನಾಯಕಿಯಾಗಿರುವ ನಟಿಯನ್ನು ಕಿರುಚಿತ್ರಕ್ಕೆ ಒಪ್ಪಿಸಿದೆ. ಆ ನಟಿ ಬೇರಾರು ಅಲ್ಲ ನೀತು.

Advertisement

ಹೌದು, ನಟಿ ನೀತು ಈಗ ಸದ್ದಿಲ್ಲದೇ “ಮರೀಚಿಕೆ’ ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. ಶರತ್‌ ಬಾಬು ಎನ್ನುವವರು ಈ ಕಿರುಚಿತ್ರದ ನಿರ್ದೇಶಕರು. ಜೊತೆಗೆ ಛಾಯಾಗ್ರಹಣ ಕೂಡಾ ಅವರದೇ. ಈಗಾಗಲೇ ಈ ಕಿರುಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಟಿಯೊಬ್ಬಳ ಜೀವನದ ಕುರಿತಾಗಿ ಈ ಕಿರುಚಿತ್ರ ಮಾಡಲಾಗಿದೆ.

ನೀತು ಇಲ್ಲೂ ನಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. “ಕಿರುಚಿತ್ರ ತಂಡದ ಸದಸ್ಯರು ಸಿನಿಮಾವೊಂದರ ಮೂಲಕ ನನಗೆ ಮೊದಲೇ ಪರಿಚಿತರು. ಅವರು ಮಾಡಿಕೊಂಡಿರುವ ಕಾನ್ಸೆಪ್ಟ್ ತುಂಬಾ ಇಷ್ಟವಾಯಿತು. ನಟಿ ವೈಯಕ್ತಿಕ ಬದುಕಿನ ಸೂಕ್ಷ್ಮ ಅಂಶವನ್ನು ಇಲ್ಲಿ ಬಿಂಬಿಸಲಾಗಿದೆ’ ಎಂದು ಕಿರುಚಿತ್ರದ ಬಗ್ಗೆ ಹೇಳುತ್ತಾರೆ ನೀತು.

ಅಂದಹಾಗೆ, ಹಲವು ಸಿನಿಮಾಗಳಲ್ಲಿ ನಟಿಸಿರುವ ನೀತು ಅವರಿಗೆ ಇದು ಮೊದಲ ಕಿರುಚಿತ್ರ. ಹಾಗಾಗಿ, ಅನುಭವ ಕೂಡಾ ಹೊಸತಾಗಿತ್ತಂತೆ. ಇದರ ಹೊರತಾಗಿ ನೀತು “ವಜ್ರಮುಖೀ’, “ಅಮೃತಗಳಿಗೆ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ “ಹ್ಯಾಂಗೋವರ್‌’ ಚಿತ್ರದ ಹಾಡೊಂದರಲ್ಲೂ ಕಾಣಿಸಿಕೊಂಡಿದ್ದು, ಅದು ಬಿಡುಗಡೆಗೆ ಸಿದ್ಧವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next