Advertisement

ಮೇ 7ಕ್ಕೆ ಯುಜಿ ನೀಟ್‌ ಪರೀಕ್ಷಾ ದಿನಾಂಕ ಪ್ರಕಟ

12:10 AM Dec 17, 2022 | Team Udayavani |

ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದ ಯುಜಿ ನೀಟ್‌ ಮೇ 7ರಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಏಜನ್ಸಿ (ಎನ್‌ಟಿಎ) ಪರೀಕ್ಷಾ ದಿನಾಂಕ ಪ್ರಕಟಿಸಿದೆ.

Advertisement

ನೀಟ್‌ (ಯುಜಿ)-2023 ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾದ ಬಳಿಕ ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರವೇ ಸಲ್ಲಿಸಬೇಕು. ಪ್ರತೀ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮೇ 21-31ರ ವರೆಗೆ ಸಿಇಯುಟಿ
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ವು ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) – 2023ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪರೀಕ್ಷಾ ದಿನಾಂಕಗಳು
ಮೇ 21- ಮೇ 31,  2023
ಮೀಸಲು ದಿನಾಂಕಗಳು: ಜೂ. 1, ಜೂ. 7

ಜೆಇಇ ಮೈನ್‌ ನೋಂದಣಿ ಆರಂಭ
2023-24ನೇ ಸಾಲಿನ ಎಂಜಿನಿಯ ರಿಂಗ್‌ ಕೋರ್ಸ್‌ ಪ್ರವೇಶಾತಿಗಾಗಿ ಇರುವ ಜೆಇಇ ಮೈನ್‌ನ ವೇಳಾಪಟ್ಟಿಯನ್ನೂ ಎನ್‌ಟಿಎ ಪ್ರಕಟಿಸಿದ್ದು, ಡಿ. 15ರಿಂದ ನೋಂದಣಿ ಆರಂಭಗೊಂಡಿದೆ. ಜ. 12ರ ವರೆಗೆ ನೋಂದಣಿಗೆ ಅವಕಾಶ ಇದೆ.

Advertisement

ಜೆಇಇ-ಮೈನ್‌ ಪರೀಕ್ಷಾ ದಿನಾಂಕ l ಜನವರಿ 24- 31, 2023

ಸಿಇಟಿ ದಿನಾಂಕ ಚರ್ಚಿಸಿ ನಿರ್ಧಾರ
ಉಡುಪಿ: ನೀಟ್‌ ದಿನಾಂಕ ಪ್ರಕಟವಾಗಿರು ವುದು ಗಮನಕ್ಕೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸಂಬಂಧ ಸರಕಾರ ಮತ್ತು ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಪ್ರಾಧಿಕಾರದ ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next