Advertisement
ಗುರುವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಕ್ರಮದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾಸಂಸ್ಥೆ (ಎನ್‌ಟಿಎ) ಕಾರ್ಯನಿರ್ವಹಣೆಯ ಕುರಿತು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಶೂನ್ಯ ಪ್ರಮಾದದ ಪರೀಕ್ಷೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು. ಇದೇ ವೇಳೆ, ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆಯು ಡಾರ್ಕ್‌ನೆಟ್ ಮತ್ತು ಟೆಲಿಗ್ರಾಮ್‌ನಲ್ಲಿ ಸೋರಿಕೆಯಾದ ಬಗ್ಗೆ ತಿಳಿದುಬಂದ ಕೂಡಲೇ ನಾವು ಪರೀಕ್ಷೆಯನ್ನು ರದ್ದು ಮಾಡಿದೆವು ಎಂದೂ ತಿಳಿಸಿದರು.
ಎನ್‌ಟಿಎ ಸಂರಚನೆ, ಕಾರ್ಯನಿರ್ವಹಣೆ, ಪರೀûಾ ಪ್ರಕ್ರಿಯೆಗಳು, ಪಾರದರ್ಶಕತೆ ಮತ್ತು ಡೇಟಾ ಸುರಕ್ಷೆ ಕುರಿತು ಉನ್ನತ ಮಟ್ಟದ ಸಮಿತಿಯಿಂದ ಶಿಫಾರಸುಗಳನ್ನು ನಿರೀಕ್ಷಿಸಲಾಗುವುದು. ತಪ್ಪಿತಸ್ಥರು ಎಂದು ಕಂಡುಬರುವ ಎನ್‌ಟಿಎಯ ಯಾವುದೇ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದರು.
ಸರಕಾರ ವಿದ್ಯಾರ್ಥಿಗಳ ಹಿತರಕ್ಷಣೆಗೆ ಬದ್ಧವಾಗಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಪರೀಕ್ಷೆ ನಡೆಸುವ ವಿಷಯದಲ್ಲಿ ಪಾರದರ್ಶಕತೆಗೆ ಸಂಬಂಧಿಸಿದಂತೆ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದರು.
Related Articles
ಪಟ್ನಾ: ನೀಟ್-ಯುಜಿ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಿಜ ಎಂದು ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪರೀಕ್ಷೆಯ ಹಿಂದಿನ ದಿನ ರಾತ್ರಿಯೇ ನಮಗೆ ಪ್ರಶ್ನೆಪತ್ರಿಕೆ ನೀಡಿ, ಉತ್ತರ ಬಾಯಿಪಾಠ ಮಾಡಿಸಲಾಗಿತ್ತು. ಮಾರನೇ ದಿನ ಪರೀಕ್ಷೆ ವೇಳೆ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಬಂಧಿತ ನೀಟ್ ಆಕಾಂಕ್ಷಿ ಹೇಳಿದ್ದಾನೆ.
Advertisement
ನಿರ್ದಿಷ್ಟ ಪ್ರದೇಶದಲ್ಲಿ ನೀಟ್ ಅಕ್ರಮಪ್ರಾಥಮಿಕ ತನಿಖೆಯ ಪ್ರಕಾರ ನೀಟ್ ಪರೀಕ್ಷೆಯ ಅಕ್ರಮವು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನಡೆದಿರುವ ಸಾಧ್ಯತೆಗಳಿವೆ. ಈ ಕುರಿತು ನಾವು ಬಿಹಾರ ಸರಕಾರದಿಂದ ಮಾಹಿತಿ ಪಡೆದುಕೊಂಡಿದ್ದೇವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಪಟ್ನಾ ಪೊಲೀಸರು ಈಗಾಗಲೇ ಆಳವಾಗಿ ತನಿಖೆ ಕೈಗೊಂಡಿದ್ದು, ಶೀಘ್ರವೇ ಕೇಂದ್ರಕ್ಕೆ ವರದಿ ನೀಡಲಿದ್ದಾರೆ ಎಂದು ಸಚಿವ ಪ್ರಧಾನ್ ಹೇಳಿದರು. ಡಾರ್ಕ್‌ನೆಟ್, ಟೆಲಿಗ್ರಾಮ್‌ನಲ್ಲಿ ನೆಟ್ ಪ್ರಶ್ನೆಪತ್ರಿಕೆ ಸೋರಿಕೆ
2024ರ ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆಯು ಡಾರ್ಕ್‌ನೆಟ್ ಮತ್ತು ಟೆಲಿಗ್ರಾಮ್‌ನಲ್ಲಿ ಸೋರಿಕೆಯಾಗಿತ್ತು. ಹಾಗಾಗಿ ಪರೀಕ್ಷೆಯನ್ನು ರದ್ದು ಮಾಡಲಾಯಿತು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು. ಡಾರ್ಕ್‌ನೆಟ್‌ನಲ್ಲಿದ್ದ ನೆಟ್ ಪ್ರಶ್ನೆಪತ್ರಿಕೆಯು ಒರಿಜನಲ್ ಪ್ರಶ್ನೆ ಪತ್ರಿಕೆ ನಡುವೆ ಸಾಮ್ಯತೆ ಇದ್ದಿದ್ದರಿಂದ ನಾವು ಪರೀಕ್ಷೆ ರದ್ದು ಮಾಡಲು ನಿರ್ಧರಿಸಿದೆವು ಎಂದು ಸಚಿವ ಪ್ರಧಾನ್ ಅವರು ತಿಳಿಸಿದರು.