Advertisement

ನೀಟ್‌ ಫ‌ಲಿತಾಂಶ ಪ್ರಕಟ; ರಾಜಸ್ಥಾನದ ತಾನಿಷ್ಕಾ ಪ್ರಥಮ; ಋಷಿಕೇಶ್‌ ಗಂಗೂಲೆ ರಾಜ್ಯಕ್ಕೆ ಪ್ರಥಮ

01:08 AM Sep 08, 2022 | Team Udayavani |

ಹೊಸದಿಲ್ಲಿ: ಬುಧವಾರ ಬೆಳಗ್ಗೆಯಿಂದಲೇ ನೀಟ್‌ ಫ‌ಲಿತಾಂಶಕ್ಕೆ ಕಾಯು ತ್ತಿದ್ದ ವೈದ್ಯಕೀಯ ಮತ್ತು ದಂತ ವೈದ್ಯ ವಿದ್ಯಾರ್ಥಿಗಳಿಗೆ ಕೊನೆಗೂ ರಾತ್ರಿ 11ರ ಸುಮಾರಿಗೆ ಎನ್‌ಟಿಎ ಸಿಹಿ ಸುದ್ದಿ ನೀಡಿದೆ.

Advertisement

ಒಟ್ಟು 720ರಲ್ಲಿ 715 ಅಂಕಗಳನ್ನು ನಾಲ್ವರು ವಿದ್ಯಾರ್ಥಿಗಳು ಪಡೆದಿದ್ದು, ನಿಯಮದ ಪ್ರಕಾರ ಅಖೀಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್‌ ರಾಜಸ್ಥಾನದ ತಾನಿಷ್ಕಾ, ದ್ವಿತೀಯ ಹೊಸದಿಲ್ಲಿಯ ವತ್ಸ ಆಶಿಷ್‌ ಬಾತ್ರಾ, ತೃತೀಯ ಕರ್ನಾಟಕದ ಋಷಿಕೇಶ್‌ ನಾಗಭೂಷಣ್‌ ಗಂಗೂಲೆ (ರಾಜ್ಯಕ್ಕೆ ಪ್ರಥಮ ಸ್ಥಾನ) ಪಡೆದಿದ್ದಾರೆ.

ಗಂಗೂಲೆ ಕರಾವಳಿ ಮೂಲದವರು. ಅಲ್ಲದೆ ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕದ ರುಚಾ ಪಾವಶೇ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಈ ಬಾರಿ ಅಗ್ರ 50 ಮಂದಿಯ ಪಟ್ಟಿಯಲ್ಲಿ ಕರ್ನಾಟಕದ 9 ಮಂದಿ ಸ್ಥಾನ ಗಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next