Advertisement
ಅವ್ಯವಹಾರ ಆರೋಪ ಹಿನ್ನೆಲೆಯಲ್ಲಿ ಹೊಸದಾಗಿ ನೀಟ್-ಯುಜಿ ಪರೀಕ್ಷೆಯನ್ನು ನಡೆಸಬೇಕೆಂದು ಕೋರಿ 10 ನೀಟ್ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ| ವಿಕ್ರಮ್ ನಾಥ್ ಮತ್ತು ನ್ಯಾ| ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಎನ್‌ಟಿಎ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುತ್ತಿರುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ನ್ಯಾಯಪೀಠ ನಿರಾಕರಿಸಿದೆ. ಜತೆಗೆ ವಿಚಾರಣೆಯನ್ನು ಜು. 8ಕ್ಕೆ ಮುಂದೂಡಿದೆ.
Related Articles
Advertisement
– ನೀಟ್ ಅಂಕ ನೀತಿಯ ಪ್ರಕಾರ ಇಷ್ಟು ಜನರಿಗೆ ಅಗ್ರಸ್ಥಾನ, ಮತ್ತಿಬ್ಬರಿಗೆ 719, 718 ಅಂಕ ಬರುವ ಸಾಧ್ಯತೆ ಇಲ್ಲ ಎನ್ನುವುದು ಬಹುತೇಕರ ವಾದ.
– ಪರೀಕ್ಷೆಯ ಬಹುತೇಕ ಟಾಪರ್‌ಗಳು ಒಂದೇ ಪರೀಕ್ಷಾ ಕೇಂದ್ರಕ್ಕೆ ಸೇರಿದವರು ಎಂಬ ಆರೋಪ.
– ಹೀಗಾಗಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎಂಬ ಅನುಮಾನ.
– ಆಯ್ದ 1,563 ವಿದ್ಯಾರ್ಥಿಗಳಿಗೆ ನಿರಂಕುಶವಾಗಿ ಕೃಪಾಂಕ ನೀಡಲಾಗಿದೆ ಎಂಬ ಆರೋಪ.
– ರಾಜಸ್ಥಾನದಲ್ಲಿ ಮೊದಲೇ ಅಂಕಗಳನ್ನು ಗುರುತಿಸಿದ್ದ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚಿ, ವಾಪಸ್ ಪಡೆಯಲಾಗಿತ್ತು ಎಂಬ ಆರೋಪ.