Advertisement

ನೀಟ್‌ ಪಿಜಿ: ಸುಪ್ರೀಂ ಕೋರ್ಟ್‌ ನಲ್ಲಿ ಮೇ 13ಕ್ಕೆ ವಿಚಾರಣೆ

12:23 AM May 11, 2022 | Team Udayavani |

ಹೊಸದಿಲ್ಲಿ: ಮೇ 21ರಂದು ಆರಂಭವಾಗಲಿರುವ 2022ನೇ ಸಾಲಿನ ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್‌ ಪಿಜಿ)ಯನ್ನು ಮುಂದೂಡಲು ಕೋರಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮೇ 13ರಂದು ನಡೆಸಲಿದೆ.

Advertisement

ಸದ್ಯ 2021ನೇ ಸಾಲಿನ ನೀಟ್‌ ಪಿಜಿ ಕೌನ್ಸೆಲಿಂಗ್‌ ನಡೆಯುತ್ತಿದ್ದು, ಈ ಬಾರಿ ನೀಟ್‌ ಪಿಜಿ ಬರೆಯಬೇಕೆಂದಿರುವ ಹಲವು ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುತ್ತಿದ್ದಾರೆ.

ಪರೀಕ್ಷೆಯ ಸಮಯದಲ್ಲೂ ಕೌನ್ಸೆಲಿಂಗ್‌ ಇರುವ ಸಾಧ್ಯತೆಯಿರುವುದರಿಂದಾಗಿ ಕೌನ್ಸಿಲಿಂಗ್‌ಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎನ್ನಲಾಗಿದೆ. ಹಾಗಾಗಿ ಪರೀಕ್ಷೆ ಮುಂದೂಡಿಕೆ ಮಾಡ ಬೇಕೆಂದು ಆ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next