Advertisement

ನೀಟ್‌: ಆಯ್ಕೆ ಪ್ರಶ್ನೆ ಸಂಬಂಧ ಎನ್‌ಟಿಎ ಸ್ಪಷ್ಟನೆ

12:27 AM Jul 28, 2021 | Team Udayavani |

ಹೊಸದಿಲ್ಲಿ: ನೀಟ್‌ ಪರೀಕ್ಷೆಯ ಸೆಕ್ಷನ್‌ ಬಿಯಲ್ಲಿ ಇರಲಿರುವ 15 ಪ್ರಶ್ನೆಗಳ ಪೈಕಿ ಅಭ್ಯರ್ಥಿಗಳು ಉತ್ತರಿಸುವ ಮೊದಲ 10 ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕಾಗಿ ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

Advertisement

ಎಲ್ಲ ನಾಲ್ಕು ವಿಷಯಗಳ ಸೆಕ್ಷನ್‌ ಬಿಯಲ್ಲಿ ಐಚ್ಛಿಕ ಪ್ರಶ್ನೆಗಳು ಇರಲಿದ್ದು, ಅಭ್ಯರ್ಥಿಗಳು 10 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರೆ ಸಾಕು ಎಂದು ಎನ್‌ಟಿಎ ಹೇಳಿದೆ.

ಆಯ್ಕೆಯ ಪ್ರಶ್ನೆಗಳ ಸಂಬಂಧ ಗೊಂದಲಗಳು ಮೂಡಿರುವ ಹಿನ್ನೆಲೆಯಲ್ಲಿ ಎನ್‌ಟಿಎ ಈ ಸ್ಪಷ್ಟನೆ ನೀಡಿದೆ. ಪರೀಕ್ಷೆ ಸೆ. 12ರಂದು ನಡೆಯಲಿದೆ. ಎಲ್ಲ ನಾಲ್ಕು ವಿಷಯಗಳ ಸೆಕ್ಷನ್‌ ಎಯಲ್ಲಿ ಕಡ್ಡಾಯ ವಾಗಿ ಉತ್ತರಿಸಬೇಕಾದ ತಲಾ 35 ಪ್ರಶ್ನೆ ಗಳು ಇರಲಿವೆ. ಸೆಕ್ಷನ್‌ ಬಿಯಲ್ಲಿ ತಲಾ 15 ಪ್ರಶ್ನೆಗಳು ಇರಲಿದ್ದು, ಅಭ್ಯರ್ಥಿಗಳು 10ನ್ನು ಉತ್ತರಿಸಿದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next