Advertisement

NEET Online: ಎನ್‌ಟಿಎಗೆ ವಿಶ್ರಾಂತ ಕುಲಪತಿಗಳ ಮನವಿ

12:39 AM Jul 15, 2024 | Team Udayavani |

ಬೆಂಗಳೂರು: ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ನಿಟ್ಟಿನಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯನ್ನು ಆಫ್ಲೈನ್‌ ಬದಲು ಆನ್‌ಲೈನ್‌ನಲ್ಲಿ ನಡೆಸಬೇಕು. ನೀಟ್‌ ಫ‌ಲಿತಾಂಶ ಅಥವಾ ರ್‍ಯಾಂಕಿಂಗ್‌ ನೀಡುವಾಗ ದ್ವಿತೀಯ ಪಿಯುಸಿಯ ಶೇ. 50 ಅಂಕಗಳನ್ನು ಪರಿಗಣಿಸಬೇಕು ಎಂದು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಸಲಹೆ ನೀಡಿದೆ.

Advertisement

ಈ ಸಂಬಂಧ ವೇದಿಕೆಯ ಅಧ್ಯಕ್ಷ ಡಾ. ಎಸ್‌. ಚಂದ್ರಶೇಖರ ಶೆಟ್ಟಿ, ನೀಟ್‌ ಪರೀಕ್ಷೆ ನಡೆಸುವ ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ)ಯ ಸುಧಾರಣ ಸಮಿತಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ.

ಸರಕಾರವು ಕೋಚಿಂಗ್‌ ಉದ್ದಿಮೆ ಮತ್ತು ಕೆಲವು ಖಾಸಗಿ ಸಂಸ್ಥೆಗಳ ಲಾಬಿಯನ್ನು ನಿಯಂತ್ರಿಸಿ ಉನ್ನತ ಶಿಕ್ಷಣದ ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಪರೀಕ್ಷೆಯ ಮೂಲ ಉದ್ದೇಶ ಈಡೇರಿತ್ತಿಲ್ಲ. ಗ್ರಾಮೀಣ ವಿದ್ಯಾರ್ಥಿಗಳು ಮೆಡಿಕಲ್‌ ಕಾಲೇಜ್‌ ಪ್ರವೇಶದಿಂದ ವಂಚಿತಗೊಳ್ಳುತ್ತಿದ್ದಾರೆ.

ಇದು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಲಾಭ ತರುತ್ತಿರುವುದರ ಜತೆಗೆ ವೈದ್ಯಕೀಯ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿದೆ. ಶೇ. 35 ಅಂಕ ಪಡೆದವರಿಗೂ ಎಂಬಿಬಿಎಸ್‌ಗೆ ಪ್ರವೇಶ ಪಡೆಯುವ ಅವಕಾಶ ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next