Advertisement

ಯೋಗ, ನ್ಯಾಚುರೋಪತಿಗೆ ನೀಟ್‌ ಕಡ್ಡಾಯವಲ್ಲ? 

12:30 AM Mar 10, 2019 | |

ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್‌) ವ್ಯಾಪ್ತಿಗೆ ಬರುವ ಆಯುಷ್‌ ಕೋಸ್‌ ìಗಳಲ್ಲಿ ಯೋಗ ಮತ್ತು ನ್ಯಾಚುರೋಪಥಿಗೆ ಈ ವರ್ಷದಿಂದ ವಿನಾಯಿತಿ ನೀಡಲಾಗಿದೆ.

Advertisement

ಈ ವರ್ಷದ ಆಯುಷ್‌ ಸೀಟುಗಳನ್ನು ನೀಟ್‌ ರ್‍ಯಾಂಕಿಂಗ್‌ ಆಧಾರದಲ್ಲೇ ಹಂಚಿಕೆ ಮಾಡಲಾಗಿತ್ತು. 2019-20ನೇ ಸಾಲಿನ ಆಯುಷ್‌ ಕೋರ್ಸ್‌ಗಳು ಕೂಡ ನೀಟ್‌ ಅಡಿಯಲ್ಲೇ ಬರಲಿದೆಯಾದರೂ, ಯೋಗ ಮತ್ತು ನ್ಯಾಚುರೋಪಥಿಗೆ ನೀಟ್‌ ಅನ್ವಯಿಸದರಲು ಕೇಂದ್ರ ಆಯುಷ್‌ ಮಂಡಳಿ ತೀರ್ಮಾನಿಸಿದೆ. ಕೇಂದ್ರ ಮಂಡಳಿ ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಆಯುಷ್‌ ಇಲಾಖೆಯ ಉನ್ನತ ಅಧಿಕಾರಿ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸರ್ಕಾರ ಇನ್ನೂ ಪ್ರತಿಕ್ರಯಿಸಿಲ್ಲ.

2018ರ ನವೆಂಬರ್‌ನಲ್ಲಿ ಕೇಂದ್ರ ಮಂಡಳಿಯಿಂದ ಬಂದಿರುವ ಸುತ್ತೋಲೆಯಲ್ಲಿ ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳು ನೀಟ್‌ ಅಧೀನಕ್ಕೆ ಬರುತ್ತವೆ ಎಂದು ಹೇಳಲಾಗಿತ್ತು. ಹೊಸ ಸುತ್ತೋಲೆ ಯಲ್ಲಿ ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳಿಗೆ ನೀಟ್‌ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಆಯುಷ್‌ ಪದಟಛಿತಿಯೊಳಗೆ ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪತಿ ಹಾಗೂ ಯೋಗ ಕೋರ್ಸ್‌ಗಳು ಬರುತ್ತವೆ. ಆಯುರ್ವೇದ, ಯುನಾನಿ, ಹೋಮಿಯೋಪಥಿಗಳು ಒಂದಕ್ಕೊಂದು ಪೂರಕ ಚಿಕಿತ್ಸಾ ಪದಟಛಿತಿಗಳಾಗಿವೆ. ಹೀಗಾಗಿ, ಈ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳು ನೀಟ್‌ ಬರೆಯಬೇಕಾಗುತ್ತದೆ. ಯೋಗ ಮತ್ತು ನ್ಯಾಚುರೋಪಥಿಗೆ ನೀಟ್‌ ಅವಶ್ಯಕತೆ ಇಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ಕಾಲೇಜು, ಸೀಟು ವಿವರ: ರಾಜ್ಯದಲ್ಲಿ ಮೂರು ಸರ್ಕಾರಿ, 85 ಅನುದಾನಿತ ಹಾಗೂ 50 ಅನುದಾನ ರಹಿತ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಆಯು ರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋ ಪಥಿ ಮತ್ತು ಯೋಗ ಕಾಲೇಜುಗಳಿವೆ. ಒಟ್ಟು 2270 ಸೀಟುಗಳಲ್ಲಿ 860 ಸರ್ಕಾರಿ ಕೋಟಾದ ಸೀಟುಗಳಿವೆ.

Advertisement

1 ಸರ್ಕಾರಿ, ಮೂರು ಅನುದಾನಿತ ಯುನಾನಿ ಕಾಲೇಜುಗಳ ಒಟ್ಟು 170 ಸೀಟುಗಳಲ್ಲಿ 74 ಸರ್ಕಾರಿ ಸೀಟುಗಳಿವೆ. ತಲಾ ಒಂದು ಸರ್ಕಾರಿ ಹೋಮಿಯೋಪಥಿ, ಯೋಗ, ನ್ಯಾಚುರೋಪಥಿ ಕಾಲೇಜು, 1 ಖಾಸಗಿ ಹೋಮಿಯೋಪಥಿ ಹಾಗೂ ಎರಡು ಖಾಸಗಿ ಯೋಗ, ನ್ಯಾಚುರೋಪಥಿ ಕಾಲೇಜುಗಳಿವೆ. ಹೋಮಿಯೋಪಥಿಯಲ್ಲಿ 805 ಸೀಟುಗಳಿದ್ದು, ಅದರಲ್ಲಿ 193 ಸರ್ಕಾರಿ ಸೀಟುಗಳಿವೆ. ಯೋಗ ನ್ಯಾಚುರೋಪಥಿಯಲ್ಲಿ 145 ಸೀಟುಗಳಿದ್ದು, 49 ಸರ್ಕಾರಿ ಸೀಟು ಸೇರಿದೆ. 2019-20ನೇ ಸಾಲಿಗೆ ಸೀಟುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಆಯುಷ್‌ಗೆ ನೀಟ್‌ ಬೇಡ
ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳಿಗೆ ನೀಟ್‌ ಕಡ್ಡಾಯ ಮಾಡಲಾಗಿದೆ. ಇದೇ ಮಾನದಂಡವನ್ನು ಆಯುಷ್‌ ಕೋರ್ಸ್‌ಗಳಿಗೂ ಅನ್ವಯಿಸಿರುವುದಕ್ಕೆ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಮೂಹ ತೀವ್ರ ವಿರೋಧ ವ್ಯಕ್ತಪಡಿಸಿವೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗೂ ಆಯುಷ್‌ ಪದ್ಧತಿಯ ಕೋರ್ಸ್‌ಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಭಾರತೀಯ ವೈದ್ಯಪದಟಛಿತಿಯ ಸೀಟುಗಳನ್ನು ನೀಟ್‌ ಮೂಲಕ ಆಯ್ಕೆ ಮಾಡುವುದು ಸರಿಯಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಮೂಲಕ ಭರ್ತಿ ಮಾಡುವಂತಾಗಬೇಕು ಎಂದು ಹಲವು ಸಂಘಟನೆಗಳು ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿವೆ.

ರಾಜು ಕಾರ್ವಿ ಕೊಡೇರಿ 

Advertisement

Udayavani is now on Telegram. Click here to join our channel and stay updated with the latest news.

Next