Advertisement
ಸ್ಮಾರ್ಟ್ ವರ್ಕ್ ಅಗತ್ಯನೀಟ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ಕಠಿನ ಪರಿಶ್ರಮದ ಜತೆಗೆ ಸ್ಮಾರ್ಟ್ ವರ್ಕ್ ಸಹ ಅಗತ್ಯ. ಇತರ ಎಲ್ಲ ವಿಷಯಗಳಿಗಿಂತ ಜೀವಶಾಸ್ತ್ರದ ವಿಷಯದಲ್ಲಿ ಗಳಿಸಿದ ಅಂಕಗಳು ಅಭ್ಯರ್ಥಿಯ ರ್‍ಯಾಂಕ್ ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜೀವಶಾಸ್ತ್ರ ವಿಷಯದಲ್ಲಿ ಕೇಳುವ ಶೇ.90 ರಷ್ಟು ಪ್ರಶ್ನೆಗಳಲ್ಲಿ 80ರಿಂದ 85ರಷ್ಟು ಪ್ರಶ್ನೆಗಳು NCERT ಪುಸ್ತಕ ಆಧಾರಿತವಾಗಿರುತ್ತವೆ. 30ರಿಂದ 35 ಪ್ರಶ್ನೆಗಳು ಒಂದು ಸಾಲಿನ ಪ್ರಶ್ನೆಗಳಾಗಿರುತ್ತವೆ. ಇತರ ಎಲ್ಲವೂ ಕಾನ್ಸೆಪ್ಟ್ ಆಧಾರಿತ ಮತ್ತು ಅಪ್ಲೆ„ಡ್ ಬಯೋಲಜಿ ಪ್ರಶ್ನೆಗಳಾಗಿರುತ್ತವೆ.
ಹೆಚ್ಚು ಅಂಕ ಗಳಿಸಲು ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಗಳನ್ನು ದಿನನಿತ್ಯ 2ರಿಂದ 3 ಗಂಟೆಗಳ ಕಾಲ ಬಿಡಿಸಿ. ಸಮಯ ಕೊಡುವುದರಲ್ಲಿ ಯಾವುದೇ ರಾಜಿ ಇಲ್ಲದಂತೆ ಅಭ್ಯಾಸ ನಡೆಸಬೇಕು. ಸಾಮಾನ್ಯ ಪ್ರಶ್ನೆಗಳತ್ತ ಗಮನಹರಿಸಿ
ಹಿಂದಿನ ವರ್ಷಗಳ ಪರೀಕ್ಷೆಗಳಲ್ಲಿ ಕೇಳಿದ ಸಾಮಾನ್ಯ ಪ್ರಶ್ನೆಗಳು ಮತ್ತು ಆ ಅಧ್ಯಯನಗಳ ಬಗ್ಗೆ ಹೆಚ್ಚು ಗಮ ನಹರಿಸಿ. ಬಯೋಮೋಲಿಕ್ಯೂಲ್ಸ್, ಪಾಲಿಮರ್ಸ್, ಡೈಲಿ ಆ್ಯಂಡ್ ಎನ್ವಿರಾನ್‌ಮೆಂಟ್ ಕೆಮಿಸ್ಟ್ರಿ ಬಗ್ಗೆ ಯಾವಾಗಲೂ ಪ್ರಶ್ನೆಗಳು ಇದ್ದೇ ಇರುತ್ತವೆ. ಈ ಬಗ್ಗೆ ಹಲವರು ಅಸಡ್ಡೆ ಮಾಡುತ್ತಾರೆ. ಆದರೆ ಈ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದು.
Related Articles
ಹೆಚ್ಚು ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉತ್ತಮ ರೆಫರೆನ್ಸ್ ಬುಕ್ ಅತ್ಯಗತ್ಯ. ವಿಶೇಷವಾಗಿ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಿಗೆ ಉತ್ತಮ ಪಠ್ಯ ಅಗತ್ಯ. ಜೀವಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದಂತೆ NCERT ಪುಸ್ತಕಗಳನ್ನು ಓದಿ.
Advertisement
ಟೆಸ್ಟ್ ಸೀರೀಸ್ ತೆಗೆದುಕೊಳ್ಳಿಕೋಚಿಂಗ್ ಪಡೆಯದೇ ಓದಿದರೂ ಪರವಾಗಿಲ್ಲ. ಆದರೆ ಸ್ವಲ್ಪ ಮಟ್ಟಿಗಾದರೂ ಟೆಸ್ಟ್ ಸೀರೀಸ್ ತೆಗೆದುಕೊ ಳ್ಳುವುದು ಹೆಚ್ಚು ಅಂಕ ಗಳಿಸುವ ದೃಷ್ಟಿಯಿಂದ ಒಳ್ಳೆಯದು. ಭೌತಶಾಸ್ತ್ರ ಕ್ಲಿಷ್ಟಕರದ ವಿಷಯ ಎಂಬುದು ನಿಜ. ಆದರೆ ಕೆಮಿಸ್ಟ್ರಿ ಮತ್ತು ಬಯೋಲಜಿ ವಿಷಯಗಳನ್ನು ಪಕ್ಕಕ್ಕೆ ಸರಿಸಿ, ಹೆಚ್ಚು ಒಂದೇ ವಿಷಯವನ್ನು ಓದುವುದು ಒಳ್ಳೆಯದಲ್ಲ. ಈ ಅಧ್ಯಯನಗಳ ಅಭ್ಯಾಸ ಮರೆಯಬೇಡಿ
ಪ್ರಥಮ ಮತ್ತು ದ್ವಿತೀಯ ಪಿಯುಸಿ ಎರಡರಲ್ಲೂ ಕೆಮಿಸ್ಟ್ರಿ ವಿಷಯದ ಕೊನೆ ಅಧ್ಯಯನ ಎಕೋಲಜಿ ಮತ್ತು ಬಯೋಲಜಿಯನ್ನು ಓದುವುದನ್ನು ಮರೆಯಬೇಡಿ. ಮೈಕ್ರೋ ಬಯೋಲಜಿ ಮತ್ತು ಬಯೋಟೆಕ್ನಾಲಜಿ ಮತ್ತು ಫಿಸಿಯೋಲಜಿ ಬಗ್ಗೆ ಹೆಚ್ಚು ಗಮನಹರಿಸಿ. ಮಾರ್ಡನ್ ಫಿಸಿಕ್ಸ್ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದ್ದು, ಇದು ಕೆಮಿಸ್ಟ್ರಿ ಪಠ್ಯಕ್ಕೂ ಸಹಾಯಕವಾಗುತ್ತದೆ. ಕಳೆದ ಮೂರು ವರ್ಷಗಳಿಂದ ತರಂಗ ದೃಗ್ವಿಜ್ಞಾನ ಬಗ್ಗೆ ಕೇಳಲಾಗುತ್ತಿದೆ. ಇದರ ಬಗ್ಗೆಯೂ ಅಧ್ಯಯನ ಮುಖ್ಯ. ನೀಟ್ ಪರೀಕ್ಷೆಗೆ ಅರ್ಹತೆ
ಸರಕಾರಿ ಅಥವಾ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇನ್ನಿತರ ಯಾವುದೇ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಪರೀಕ್ಷೆಯೇ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್). ಎಂಬಿಬಿಎಸ್, ಬಿಡಿಎಸ್ ಅಥವಾ ಸ್ನಾತಕೋತ್ತರ ಕೋರ್ಸ್ ಎಂ.ಡಿ., ಎಂ.ಎಸ್. ಅಭ್ಯಸಿಸಲು ಬಯಸುವ ವಿದ್ಯಾರ್ಥಿ ಗಳಿಗೆ ಇದೊಂದು ಪ್ರವೇಶ ಪರೀಕ್ಷೆ. ನೀಟ್ ಪರೀಕ್ಷೆಯನ್ನು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿಕೊಡುತ್ತದೆ. ಎನ್‌ಟಿಎಯು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ವಯಸ್ಸು, ಅರ್ಹತೆ ಎಲ್ಲವನ್ನೂ ನಿರ್ಧರಿಸುತ್ತದೆ. ನೀಟ್ ಪರೀಕ್ಷೆ ಜಾರಿಯಾದ ಅನಂತರ ಈ ಹಿಂದೆ ಇದ್ದ ಅಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಹಾಗೂ ಹಲವಾರು ರಾಜ್ಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳು ರದ್ದುಗೊಂಡಿವೆ.