Advertisement

ಒಳಉಡುಪು ಬಿಚ್ಚಿಸಿದ ಪ್ರಕರಣ: ತೀವ್ರಗೊಂಡ ವಿವಾದ:ನೀಟ್‌ ಕೇಂದ್ರದಲ್ಲಿ ವಿದ್ಯಾರ್ಥಿಗಳ ಗಲಾಟೆ

09:09 PM Jul 19, 2022 | Team Udayavani |

ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ನೀಟ್‌ ಪರೀಕ್ಷಾ ಕೇಂದ್ರವೊಂದರಲ್ಲಿ ಹಲವು ವಿದ್ಯಾರ್ಥಿನಿಯರ ಒಳ ಉಡುಪನ್ನೂ ಪರೀಕ್ಷಕರು ತೆಗೆಸಿದ್ದಾರೆಂಬ ಪ್ರಕರಣ ಮಂಗಳವಾರ ಇನ್ನಷ್ಟು ತೀವ್ರವಾಗಿದೆ.

Advertisement

ಇದರಿಂದ ರೊಚ್ಚಿಗೆದ್ದಿರುವ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರದೊಳಗೆ ನುಗ್ಗಿ ಕಾಲೇಜಿನ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಇದಕ್ಕಾಗಿ ಹಾಕಿ ಸ್ಟಿಕ್‌ಗಳನ್ನು ಬಳಸಲಾಗಿದೆ.

ವಿದ್ಯಾರ್ಥಿಗಳ ಹೋರಾಟ ತೀವ್ರಗೊಂಡಾಗ ಮಧ್ಯಪ್ರವೇಶಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ಹೊರಹಾಕಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ತನ್ನ ತಂಡವನ್ನು ಕೇರಳಕ್ಕೆ ಕಳುಹಿಸಿ, ತನಿಖೆ ನಡೆಸುವುದಾಗಿ ಹೇಳಿದೆ.

ಅಲ್ಲದೇ ಇಡೀ ಘಟನೆ ಅನುಮಾನಾಸ್ಪದವಾಗಿದೆ, ನೀಟ್‌ಗೆ ಇದುವರೆಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲವೆಂದು ಹೇಳಿಕೊಂಡಿದೆ.

ಕೊಲ್ಲಂನ ಆಯೂರ್‌ನಲ್ಲಿರುವ ಮಾರ್‌ಥೋಮಾ ಐಐಟಿಯಲ್ಲಿ 17 ವರ್ಷದ ಯುವತಿಯ ಒಳಉಡುಪಿನಲ್ಲಿ ಲೋಹದ ಅಂಶವಿತ್ತು ಎಂಬ ಕಾರಣಕ್ಕೆ, ಅವರ ಬ್ರಾವನ್ನು ಬಿಚ್ಚಿಸಲಾಗಿದೆ ಎಂಬುದು ದೂರು. ಇದರ ವಿರುದ್ಧ ಯುವತಿಯ ತಂದೆ ಕೊಲ್ಲಂನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಮಾನವ ಹಕ್ಕು ಆಯೋಗಕ್ಕೂ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕೊಟ್ಟರಕ್ಕರ ಡಿವೈಎಸ್‌ಪಿಗೆ ಮೂವರು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.

ತಲೆಗೂದನ್ನು ಮುಂದಕ್ಕೆ ಹರಡಿಕೊಂಡೆ:
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿಯೊಬ್ಬರು, ತನ್ನ ಬ್ರಾ ಬಿಚ್ಚಿಸಿದ್ದರಿಂದ ಎದೆಯನ್ನು ಮುಚ್ಚಿಕೊಳ್ಳಲು , ತಲೆಗೂದಲನ್ನು ಮುಂದಕ್ಕೆ ಹರಡಿಕೊಂಡು ಪರೀಕ್ಷೆ ಬರೆಯಬೇಕಾಯಿತು ಎಂದಿದ್ದಾರೆ.

ಎನ್‌ಟಿಎ ಹೇಳಿದ್ದೇನು?:
ಕೆಲ ಯುವತಿಯರ ಒಳ ಉಡುಪನ್ನೂ ಬಿಚ್ಚಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದರೂ; ಎನ್‌ಟಿಎನ ಮೂರೂ ವೀಕ್ಷಕರು ಅಂತಹ ಯಾವುದೇ ಘಟನೆಯ ಬಗ್ಗೆ ಮಾಹಿತಿ ನೀಡಿಲ್ಲ. ಅಷ್ಟಲ್ಲದೇ ಈ ಘಟನೆಯೇ ಅನುಮಾನಾಸ್ಪದವಾಗಿದೆ. ಪರೀಕ್ಷೆಗೆ ಮುಂಚೆಯಾಗಲೀ, ನಂತರವಾಗಲಿ ನಮ್ಮ ಕೇಂದ್ರಕ್ಕೆ ಯಾವುದೇ ದೂರುಗಳು ಬಂದಿಲ್ಲ ಎಂದು ಎನ್‌ಟಿಎ ಹೇಳಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next