Advertisement

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

11:36 PM May 05, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ರವಿವಾರ ರಾಜ್ಯದಲ್ಲಿ ಸುಸೂತ್ರವಾಗಿ ನಡೆದಿದೆ.

Advertisement

ರಾಜ್ಯದಲ್ಲಿ 1.54 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಧ್ಯಾಹ್ನ 2ರಿಂದ ಸಂಜೆ 5.20ರ ವರೆಗೆ ಪರೀಕ್ಷೆ ನಡೆದಿದೆ. ನಗರದ ನೀಟ್‌ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ವಿದ್ಯಾರ್ಥಿಗಳು ಶೂ ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಇವರು ಶೂ ತೆಗೆದಿರಿಸಿ ಬರಿಗಾಲಿನಲ್ಲಿ ಬಂದು ಪರೀಕ್ಷೆ ಬರೆದರು. ಕೆಲವು ವಿದ್ಯಾರ್ಥಿನಿಯರು ಕಿವಿಯೋಲೆ, ಸರ ಧರಿಸಿ ಬಂದಿದ್ದರಿಂದ ಕೊನೆಯ ಕ್ಷಣದಲ್ಲಿ ಅವುಗಳನ್ನು ಬಿಚ್ಚಿ ಪಾಲಕರಿಗೆ ನೀಡಿ ಅನಂತರ ಪರೀಕ್ಷಾ ಕೇಂದ್ರ ಒಳ ಪ್ರವೇಶಿಸಿದ ಘಟನೆಗಳು ನಡೆದಿದೆ. ಉಳಿದಂತೆ ಪರೀಕ್ಷೆ ಸುಗಮವಾಗಿ ಸಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next