Advertisement

ಜ.6ರೊಳಗೆ ನೀಟ್‌ ಕೌನ್ಸೆಲಿಂಗ್‌: ಕೇಂದ್ರ

10:47 PM Dec 31, 2021 | Team Udayavani |

ಹೊಸದಿಲ್ಲಿ: ನೀಟ್‌-ಪಿಜಿ ಕೌನ್ಸೆಲಿಂಗ್‌ ಅನ್ನು ಜ.6ರೊಳಗೆ ನಡೆಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ಭರವಸೆ ಕೊಟ್ಟಿದ್ದಾರೆ.

Advertisement

ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಸತತ ಎರಡು ವಾರಗಳ ಕಾಲ ನಡೆದ ವಸತಿ ವೈದ್ಯರ ಹೋರಾಟವನ್ನು ಕೈಬಿಡಲಾಗಿದೆ. “ನೀಟ್‌-ಪಿಜಿ ಕೌನ್ಸೆಲಿಂಗ್‌ನ್ನು ಜ.6ರೊಳಗೆ ನಡೆಸಲಾಗುವುದು.

ಪ್ರತಿಭಟಿಸಿದ ವೈದ್ಯರ ಮೇಲೆ ಎಫ್ಐಆರ್‌ ಹಾಕಲಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಐಎಂಎ ಅಧ್ಯಕ್ಷ ಸಹಜಾನಂದ ಪ್ರಸಾದ್‌ ಸಿಂಗ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರವಾಹ ಪರಿಹಾರ ತಕ್ಷಣ ಬಿಡುಗಡೆ: ಕಾರಜೋಳ

ಇದಕ್ಕೂ ಮೊದಲು, ಫೆಡರೇಶನ್‌ ಆಫ್ ರೆಸಿಡೆಂಟ್‌ ಡಾಕ್ಟರ್ಸ್‌ ಅಸೋಸಿಯೇಶ‌ನ್‌ನ (ಎಫ್ಒಆರ್‌ಡಿಎ) ಸದಸ್ಯರು ದಿಲ್ಲಿ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ, ಚರ್ಚಿಸಿದ್ದಾರೆ. ಹೋರಾಟನಿರತ ವೈದ್ಯರ ಮೇಲೆ ಎಫ್ಐಆರ್‌ ದಾಖಲಿಸಿದ್ದನ್ನು ಹಿಂಪಡೆಯುವ ವಿಚಾರದಲ್ಲಿ ಚರ್ಚೆ ನಡೆಸಲಾಯಿತು. ಬಳಿಕ ಹೋರಾಟ ಕೈಬಿಡುವ ನಿರ್ಧಾರ ಪ್ರಕಟಿಸಲಾಯಿತು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next