Advertisement

ನೀಟ್‌: ಆಳ್ವಾಸ್‌ಗೆ ಶೇ. 90.02 ಫ‌ಲಿತಾಂಶ; ರಾಜ್ಯದಲ್ಲೇ ಗರಿಷ್ಠ

03:51 PM Jun 06, 2018 | Harsha Rao |

ಮೂಡಬಿದಿರೆ: “ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ’ (ನೀಟ್‌)ಗೆ ಹಾಜರಾದ ಆಳ್ವಾಸ್‌ ಪ.ಪೂ. ಕಾಲೇಜಿನ 3,648 ವಿದ್ಯಾರ್ಥಿಗಳ ಪೈಕಿ 3,284 ಮಂದಿ ಅರ್ಹತೆ ಗಳಿಸುವ ಮೂಲಕ ಶೇ. 90.02 ಫಲಿತಾಂಶ ವ್ಯಕ್ತವಾಗಿರುವುದು ರಾಜ್ಯದಲ್ಲೇ ದಾಖಲೆಯಾಗಿದೆ.

Advertisement

ಇವರಲ್ಲಿ 26 ಮಂದಿಗೆ 500ಕ್ಕೂ ಅಧಿಕ ಅಂಕ, 224 ವಿದ್ಯಾರ್ಥಿಗಳು 400ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ಎಸ್‌ಟಿ ಕೆಟಗರಿ¿ಲ್ಲಿ ಪದ್ಮಾವತಿ 33ನೇ ರ್‍ಯಾಂಕ್‌ ಗಳಿಸಿರುವುದು ಗಮನಾರ್ಹ ಸಾಧನೆಯಾಗಿದೆ’ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಎಸ್‌ಸಿ ಕೆಟಗರಿಯಲ್ಲಿ ಯತೀಶ ಎಂ.ಎ. 140ನೇ ರ್‍ಯಾಂಕ್‌, ವಂಶಿ ತೇಜ ಎಂ. 305ನೇ, ಗೌತಮ ಬುದ್ಧ ಎನ್‌. ಮೀಶಿ 457ನೇ ರ್‍ಯಾಂಕ್‌, ನಂದೀಶ್‌ ಎಸ್‌. 458ನೇ ರ್‍ಯಾಂಕ್‌ ಗಳಿಸಿದ್ದಾರೆ. ಎಸ್‌ಟಿ ಕೆಟಗರಿಯಲ್ಲಿ ವೆಂಕಟೇಶ್‌ ದೋರೆ 409ನೇ, ನೇತ್ರೇಶ್‌ ಎಂ. ಆರ್‌. 561ನೇ ರ್‍ಯಾಂಕ್‌ ಪಡೆದಿದ್ದಾರೆ. ಭಿನ್ನ ಚೇತನ ವಿಭಾಗದಲ್ಲಿ ರಕ್ಷಿತಾ ಬಿ.ಪಿ. 295, ಭಾಗ್ಯಶ್ರೀ 371, ಅಜಯ್‌ ಕುಮಾರ್‌ ಎಚ್‌. ಪಿ. 519, ಮಂಜುನಾಥ ದೊಂಬರ್‌ 286ನೇ ರ್‍ಯಾಂಕ್‌ ಗಳಿಸಿದ್ದಾರೆ.

720ರಲ್ಲಿ 502ರಿಂದ 573 ಅಂಕ ಗಳಿಸಿದ  ಜನರಲ್‌  ಕೆಟಗರಿಯವರು
1. ಸುಶ್ರುತ್‌ ಯು.ಕೆ. (573), 2. ಶಿವರಾಜ್‌ ಎಸ್‌. ಸೊನ್ನದ (556), 3.ಅರ್ಜುನ್‌ ವಿ. (552), 4. ಮಹೇಶ್‌ ಕೊಪ್ಪದ್‌ (550), 5. ಸುದರ್ಶನ್‌ ಕೆ.ವಿ. (545), 6.ಪದ್ಮಾವತಿ (542), 7. ಯತೀಶ ಎಂ.ಎ. (541), 8. ಅಭಿಷೇಕ್‌ (534), 9. ಹಲ್ಲೆಪ್ಪ ಗೌಡ ಹೊಸಹಳ್ಳಿ (531), 10. ಸೌರವ ಪಪತಿ (530), 11. ಚಿನ್ಮಯ್‌ ಗಜಾನನ ಭಟ್‌ (529), 12. ಚಂದನಾ ಪಿ. (529), 13. ಮಂಜುನಾಥ್‌ (528), 14. ಕಿರಣ್‌ ಗೌಡ (528), 15. ಸುಬನಹ್ಮದ್‌ ಬಿ. ಲಬ್ಬಿ (519), 16. ತಾನ್ಯಾ ಎಚ್‌.ಸಿ. (512), 17. ವಂಶಿ ತೇಜ ಎಂ. (509), 18. ಎಚ್‌.ಎಸ್‌. ಕೊಟ್ರೇಶ್‌ (508), 19. ಮೋನಿಕಾ ರೆಡ್ಡಿ (507), 20. ಮಂಜುನಾಥ ಹಿರೇಮs… (507), 21. ರುØತು ವಿ. ಕುಮಾರ್‌ (506), 22. ವಿಷ್ಣುವರ್ಧನ್‌ ಆರ್‌ ಪಡಸಲಗಿ (505), 23. ಆನಂದ್‌ ಜಿ. ಎನ್‌. (505), 24. ಅಭಿಷೇಕ್‌ ಟಿ. ಎಸ್‌. (503), 25. ಸಂದೀಪ್‌ ವೈ. ಆರ್‌. (502), 26. ವೈಷ್ಣವಿ (502).

ಪರೀಕ್ಷೆಗೆ 12 ಲಕ್ಷ ಮಂದಿ, ರಾಜ್ಯದಿಂದ 95,000 ಮಂದಿ ಹಾಜರಾಗಿದ್ದು ಆಳ್ವಾಸ್‌ ಗರಿಷ್ಠ ಪ್ರವೇಶಾರ್ಥಿ ಗಳೊಂದಿಗೆ ಗರಿಷ್ಠ ಫಲಿತಾಂಶ ದಾಖಲಿಸಿದೆ. ಕಳೆದ ವರ್ಷ ಆಳ್ವಾಸ್‌ನ 350 ಮಂದಿ ಎಂಬಿಬಿಎಸ್‌, ಡೆಂಟಲ್‌ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದು ಈ ಬಾರಿಯ ಫಲಿತಾಂಶವನ್ನು ಪರಿವೀಕ್ಷಿಸಿದಾಗ ಅಷ್ಟೇ ಸಂಖ್ಯೆಯ ಮಂದಿ ಮೆಡಿಕಲ್‌ ಪ್ರವೇಶಿಸಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ಡಾ| ಮೋಹನ ಆಳ್ವ ಹಾಗೂ ಪ್ರಾಚಾರ್ಯ ಪ್ರೊ| ರಮೇಶ್‌ ಶೆಟ್ಟಿ ಆಶಾವಾದ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next